






ಪುಣಚ: ಇಲ್ಲಿನ ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ನೂತನ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಮಾ.29ರಿಂದ ಎ.1ರವರೆಗೆ ಕ್ಷೇತ್ರದ ತಂತ್ರಿಗಳಾದ ಕುಂಟುಕೂಡೇಲು ಬ್ರಹ್ಮಶ್ರೀ ರಘುರಾಮ ರವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಧಾರ್ಮಿಕ ಕಾರ್ಯಕ್ರಮಗಳು: ಮಾ.29ರಂದು ಬೆಳಿಗ್ಗೆ 10ರಿಂದ ಪುಣಚ ನೀರುಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಬಳಿಯಿಂದ ತರವಾಡು ಮನೆಗೆ ವಿಜೃಂಭಣೆಯಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ. ಸಾಯಂಕಾಲ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಶಿಲ್ಪಿ ಮೇಸ್ತ್ರಿಗಳಿಂದ ನೂತನ ಗುಡಿಗಳ ಪರಿಗ್ರಹ, ಸ್ವಸ್ತಿ ಪುಣ್ಯಹವಾಚನ, ಪ್ರಾಸಾದ ಶುದ್ಧಿ, ನೂತನ ಮೊಗ ಆಯುಧಗಳ ಜಲಾಧಿವಾಸ, ಧ್ಯಾನಾಧಿವಾಸ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಪ್ರಸಾದ ವಿತರಣೆ ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.



ಮಾ.30ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಬಳಿಕ ೯:೩೬ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಬ್ರಹ್ಮಕಲಶಾಭಿಷೇಕ, ತಂಬಿಲಸೇವೆ, ನಿತ್ಯ ನೈಮಿತ್ತಿಗಳ ನಿರ್ಣಯ, ಪ್ರಾರ್ಥನೆ, ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಶ್ರೀ ವೆಂಕಟ್ರಮಣ ದೇವರ ಮುಡಿಪುಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪುದುಕೋಲ ನಡೆಯಲಿದೆ.
ದೈವಗಳ ನೇಮೋತ್ಸವ:
ಮಾ.31ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ, ಗಂಧಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 4ರಿಂದ ದೈವದ ಭಂಡಾರ ತೆಗೆದು ಕಳ್ಳಾಲ್ತಗುಳಿಗ ದೈವದ ನೇಮ, ಸಂಧ್ಯಾಕೊರತಿ ದೈವದ ನೇಮ, ಅನ್ನ ಸಂತರ್ಪಣೆ ನಡೆದು ಬಳಿಕ ಕುಪ್ಪೆಪಂಜುರ್ಲಿ, ವರ್ಣರಪಂಜುರ್ಲಿ, ಕಲ್ಲುರ್ಟಿ ದೈವದ ನೇಮ ನಡೆಯಲಿದೆ. ಎ.1ರಂದು ಮುಂಜಾನೆ ೫ರಿಂದ ಕುಂಟಾಲ್ತಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ಸಂಕೇಶ ಕೊಡಂಗೆ ಸಾಲಿಯಾನ್ ಕುಟುಂಬಸ್ಥರ ಪ್ರಕಟನೆ ತಿಳಿಸಿದೆ.










