ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ  ವಾರ್ಷಿಕ ಮಾರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ 

0

ಪುತ್ತೂರು:ಇತಿಹಾಸ ಪ್ರಸಿದ್ಧ ಆರ್ಯಾಪು ಗ್ರಾಮದ ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ  ವಾರ್ಷಿಕ ಮಾರಿ ಪೂಜೆಯು ಕ್ಷೇತ್ರದ ತಂತ್ರಿವರ್ಯರಾದ  ವೇದಮೂರ್ತಿ ಬ್ರಹ್ಮಶ್ರೀ ಶ್ರೀ ನಾಗೇಶ್ ತಂತ್ರಿ  ಕೆಮ್ಮಿಂಜೆ ಇವರ ನೇತೃತ್ವದಲ್ಲಿ  ಹಾಗೂ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ  ಸತೀಶ್ ರೈ  ಮಿಷನ್ ಮೊಲೆರವರ ಗೌರವಾಧ್ಯಕ್ಷತೆಯಲ್ಲಿ ಏ.20 ರಂದು ಗೊನೆ ಕಡಿದು  ಎ. 26 ಮತ್ತು ಏ. 27ರಂದು ವಾರ್ಷಿಕ ಮಾರಿ ಪೂಜೆ ನಡೆಯಲಿದೆ. 

ಶ್ರೀ ಕ್ಷೇತ್ರದ ವಾರ್ಷಿಕ ಮಾರಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ದಿನಾಂಕ ಮಾ.29 ರಂದು ಬೆಳಿಗ್ಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಷನ್ ಮೂಲೆ, ಅಧ್ಯಕ್ಷ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳಿತ ಮೊಕ್ತೇಸರ ಗೋಪಾಲ್ ಬೆಟ್ಟಂಪಾಡಿ, ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪಿ, ಕೋಶಾಧಿಕಾರಿ ಸುರೇಶ್ ಪಿ, ಸಂತೋಷ್ ನಂದಾವರ, ಹರೀಶ ಪಿ, ಯೋಗೀಶ ರಮೇಶ್ ಮೇಲಿನಕಾನ, ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರ, ವಸಂತ ಆರ್ಯಾಪು, ಭಾಸ್ಕರ ನೆಲ್ಲಿಗುಂಡಿ,  ಮಾ. ಸನ್ವಿತ್ ಸತೀಶ್  ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here