






ಪುತ್ತೂರು : ಎರಡನೇ ಸುತ್ತಿನ ಇಂಡಿಯನ್ ಟ್ಯಾಲೆಂಟ್ ಒಲಂಪಿಯಾಡ್ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ಹಲವು ರ್ಯಾಂಕ್ ಲಭಿಸಿದೆ. ಉಡ್ಡಂಗಳ ಸಂತೋಷ್ ಹಾಗೂ ಭಾರತಿ ದಂಪತಿಗಳ ಪುತ್ರ ಮನೀಶ್ ಯು ಒಂದನೇ ತರಗತಿ ಅವರು ಇಂಟರ್ನ್ಯಾಷನಲ್ ಟ್ಯಾಲೆಂಟ್ ಒಲಿಂಪಿಯಡ್ ಪರೀಕ್ಷೆಯ ಗಣಿತ ವಿಷಯದಲ್ಲಿ ರಾಜ್ಯದಲ್ಲಿ ಮೂರನೇ ರ್ಯಾಂಕ್, ಮತ್ತು ಕೆಮನಡ್ಕ ಸುಂದರ ಪೂಜಾರಿ ಹಾಗೂ ಮಮತಾ ದಂಪತಿಗಳ ಪುತ್ರ ಏಳನೇ ತರಗತಿ ಸಾತ್ವಿಕ್ ಡಿ ಅವರು ವಿಜ್ಞಾನ ವಿಷಯದಲ್ಲಿ ನಾಲ್ಕನೇ ರ್ಯಾಂಕ್ ಪಡೆದು ವಿದ್ಯಾರ್ಥಿವೇತನಕ್ಕೆ ಭಾಜನರಾಗಿರುತ್ತಾರೆ.


ಸವಣೂರು ಅಮೈ ಮನೆ ಪ್ರಶಾಂತ್ ಹಾಗೂ ಚೈತ್ರ ದಂಪತಿಗಳ ಪುತ್ರಿ ಯುಕ್ತ ಎ.ಪಿ ಒಂದನೇ ತರಗತಿ ಸಾಮಾನ್ಯ ಜ್ಞಾನ ವಿಷಯದಲ್ಲಿ 23ನೇ ರ್ಯಾಂಕ್, ಕಕ್ಕೂರು ಗೋವಿಂದ ನಾಯ್ಕ ಬಿವಿದ್ಯಾಲತ ದಂಪತಿಗಳ ಪುತ್ರ ರುತ್ವಿನ್ ಬಿ 1ನೇ ತರಗತಿ ಚಿತ್ರಕಲಾ ವಿಷಯದಲ್ಲಿ 24ನೇ ರ್ಯಾಂಕ್,ಸೂಡುಕುಳಿ ಪ್ರಕಾಶ್ ರೈ ಎಸ್ ಹಾಗೂ ಅಶ್ವಿತಾ ಅವರ ಪುತ್ರಿ ಆಪ್ತಿ ಎಸ್ ರೈ 7ನೇ ತರಗತಿ ಇವರು ವಿಜ್ಞಾನ ವಿಷಯದಲ್ಲಿ 25ನೇ ರ್ಯಾಂಕ್, ಆದಿತ್ಯ ಘಾಟೆ ದರ್ಬೆ ಹಾಗೂ ಪ್ರಸನ್ನ ಕುಮಾರಿ ದಂಪತಿಗಳ ಪುತ್ರಿ ಅರ್ಣವಿ ಘಾಟೆ 6ನೇ ತರಗತಿ ಲಾಜಿಕಲ್ ರೀಸನಿಂಗ್ ವಿಷಯದಲ್ಲಿ 17ನೇ ರ್ಯಾಂಕ್, ಬಡೆಕ್ಕೋಡಿ ಅನಿಲ್ ಕುಮಾರ್ ಹಾಗೂ ಶಶಿ ಬಿ.ಜಿ ದಂಪತಿಗಳ ಪುತ್ರಿ ಆಧ್ಯ ಎ ಐದನೇ ತರಗತಿ ಅವರು ಚಿತ್ರಕಲಾ ವಿಷಯದಲ್ಲಿ 22 ನೇ ರ್ಯಾಂಕ್ ಹಾಗೂ ಗಿರೀಶ್ ಬಾಳೆಗುಳಿ ಮತ್ತು ಅಪರ್ಣ ದಂಪತಿಗಳ ಪುತ್ರ ಅದ್ವೈತ ತಿರುಮಲೇಶ್ ಎಂ ಅವರು ಇಂಗ್ಲಿಷ್ ವಿಷಯದಲ್ಲಿ 19ನೇ ರ್ಯಾಂಕ್ ಪಡೆದು ಎಕ್ಸಲೆಂಟ್ ಅವಾರ್ಡ್ ಗೆ ಭಾಜನರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಹಾಗೂ ಮುಖ್ಯಗುರು ರಾಜೇಶ್ ಎನ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.













