ನಿವೃತ್ತಿ ಅಂಚಿನಲ್ಲಿ ಇರುವವರಿಗೆ ಪಿಯುಸಿ ಮೌಲ್ಯಮಾಪನ ಕೇಂದ್ರದಲ್ಲಿ ಗೌರವ ಸನ್ಮಾನ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ಸಂಘ ಮತ್ತು ಉಡುಪಿ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಜಂಟಿ ಆಶ್ರಯ ದಲ್ಲಿ , ನಿವೃತ್ತಿ ಅಂಚಿನಲ್ಲಿ ಇರುವ ಹಿರಿಯ ಮೂರು ಮೌಲ್ಯಮಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಜ್ಪೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ರತ್ನಾಕರ ಬನ್ನಾಡಿ, ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಶ್ವನಾಥ ರೈ ಹಾಗೂ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರಶೇಖರರವರಿಗೆ ಶಾಲು ಹೊದಿಸಿ ಪೇಟ ಇರಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ನೋರಿನ್ ಫ್ಲೋರಿನ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಶಿಬಿರದ ಪರಿವೀಕ್ಷಕ ಜಯಾನಂದ ಯನ್. ಸುವರ್ಣ, ಮುಖ್ಯ ಪರೀಕ್ಷಕ ಕುಸುಮಾವತಿ, ಕಚೇರಿ ಉಪಮುಖ್ಯಪರೀಕ್ಷಕ ರಾದ ಚಂದ್ರು ಎನ್, ಸ್ವರ್ಣಕಲಾ, ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ದಯಾನಂದ ಸ್ವಾಗತಿಸಿ ಅನುರಾಧ ಎಚ್. ವಂದಿಸಿದರು. ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here