ಬಡಗನ್ನೂರು: ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಕ್ರೀಡಾ ತರಬೇತಿ ಶಿಬಿರ

0

ಬಡಗನ್ನೂರು: ಕ್ರೀಡಾ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲಿ ಎಂದು ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ವಿಘ್ನೇಶ್ ಹಿರಣ್ಯರವರು ಹೇಳಿದರು. ಅವರು ಏ.1ರಿಂದ 10ತನಕ ನಡೆಯುವ ಕ್ರೀಡಾ ತರಬೇತಿಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಶಿಕ್ಷಣ ಒಂದು ಅಂಗ. ಕ್ರೀಡೆ ಸಂಸ್ಕೃತಿ ಮತ್ತು ಸಂಸ್ಕಾರ ಪ್ರತಿಬಿಂಬಿಸುವ ಜತೆಗೆ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಈ ನಿಟ್ಟಿನಲ್ಲಿ 10 ದಿನಗಳ ಕಾಲ ನಡೆಯುವ ಕ್ರೀಡಾ ತರಬೇತಿ ಶಿಬಿರದ ಸಂಪೂರ್ಣ ಸದುಪಯೋಗ ಪಡೆದು ಮುಂದೆ ನಡೆಯಲಿರುವ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿ ತರುವಂತಾಗಲಿ ಎಂದು ಸಂಸ್ಥೆಯ ಸಂಚಾಲಕ ವಿಘ್ನೇಶ್ ಹಿರಣ್ಯರವರು ಹೇಳಿ ಶುಭ ಹಾರೖೆಸಿದರು.

ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ರವರು ಮಾತನಾಡಿ ಕ್ರೀಡಾ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢಶಾಲಾ ಎಸ್.ಡಿಯಂಸಿ ಅಧ್ಯಕ್ಷ ಲಿಂಗಪ್ಪಗೌಡ ಮೋಡಿಕೆ, ಪ್ರಾಥಮಿಕ ಶಾಲಾ ಎಸ್ ಡಿಯಂಸಿ ಅಧ್ಯಕ್ಷ  ಕೇಶವ ಪ್ರಸಾದ್ ನೀಲಗಿರಿ, ರಾಜ್ಯ ವಾಲಿಬಾಲ್ ತರಬೇತುದಾರ ರಫೀಕ್ ಆತೂರು, ಅಂತರಾಷ್ಟ್ರೀಯ ಕ್ರೀಡಾಪಟು ಪೂರ್ಣಿಮಾ, ಪ್ರೌಢಶಾಲಾ ಮುಖ್ಯ ಗುರುಗಳಾದ ಸುಮನಾ ಬಿ, ಪ್ರಾಥಮಿಕ ಶಾಲಾ ಮುಖ್ಯಗುರು ರಾಜಗೋಪಾಲ್ ಎನ್, ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಂಗಣದಲ್ಲಿ ತೆಂಗಿನಕಾಯಿ ಒಡೆದು, ವಾಲಿಬಾಲ್ ಎಸೆಯುವುದರ ಮೂಲಕ ಕ್ರೀಡಾ ತರಬೇತಿಗೆ ಚಾಲನೆ ನೀಡಲಾಯಿತು. ಶಿಕ್ಷಕಿ ಜ್ಯೋತಿ ಕುಮಾರಿ, ಸಹ ಶಿಕ್ಷಕಿ ಭವಿತಾ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು ಸಹಕರಿಸಿದರು.

ಕ್ರೀಡಾ ತರಬೇತಿ ಶಿಬಿರದಲ್ಲಿ  ವಾಲಿಬಾಲ್, ತ್ರೋಬಾಲ್, ಹ್ಯಾಂಡ್ ಬಾಲ್, ಕಬಡ್ಡಿ, ಖೋ ಖೋ,ಅಥ್ಲೆಟಿಕ್ ತರಬೇತಿಯನ್ನು ನೀಡಲಾಗುತ್ತಿದ್ದು ಪುತ್ತೂರು ದ್ವಾರಕ ಪ್ರತಿಷ್ಠಾನ (ರಿ.)ನ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟರವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here