






ಪುತ್ತೂರು: ಪುತ್ತೂರು ಜಾತ್ರೋತ್ಸವ ಸಂದರ್ಭ ಎ.11ರಂದು ನಡೆಯುವ ಅನ್ನದಾನದ ಮೊತ್ತವನ್ನು ಪುತ್ತೂರು ಕೆಎಸ್ಆರ್ಟಿಸಿ ಪುತ್ತೂರು ವಿಭಾಗದಿಂದ ದೇವಳಕ್ಕೆ ಹಸ್ತಾಂತರಿಸಲಾಯಿತು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿಬಾಬು ಅವರು ಅನ್ನದಾನದ ಮೊತ್ತವನ್ನು ಚೆಕ್ ಮೂಲಕ ಸಂಸ್ಥೆಯ ದೇವತಾ ಸಮಿತಿ ಪದಾಧಿಕಾರಿಗಳು ಜೊತೆಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಿಗೆ ಹಸ್ತಾಂತರಿಸಿದರು. ಕೆಎಸ್ಆರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್, ದೇವತಾ ಸಮಿತಿಯ ಅಧ್ಯಕ್ಷ ಲೋಕೇಶ್ವರ ಪಿ, ವಿಭಾಗೀಯ ಅಧೀಕ್ಷಕ ರಾಜೇಶ್ ಪಿ, ಪ್ರಶಾಂತ್, ಸತೀಶ್, ನಿತೀಶ್ ನಾಯ್ಕ, ಕೀರ್ತನ, ಅಕ್ಷತ್, ಜಿತೇಶ್, ಸಂಗೀತ, ಪುಟ್ಟ ಸಿ ಉಪಸ್ಥಿತರಿದ್ದರು.












