






ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ವತಿಯಿಂದ ಚತುರ್ಥಿ ರಂಗ ಮಂದಿರದಲ್ಲಿ ಮಾ.30ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.


ವನಿತಾ ಸಮಾಜದ ಅಧ್ಯಕ್ಷೆ ರಶ್ಮಿ ನಿರಂಜನ್ ರೈ ಮಠಂತಬೆಟ್ಟು, ಗೌರವಾಧ್ಯಕ್ಷೆ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯದರ್ಶಿ ಪವಿತ್ರ ಸುರೇಶ್ ಶೆಟ್ಟಿ ಬರೆಮೇಲು, ಉಪಾಧ್ಯಕ್ಷೆ ಸುಲೋಚನಾ ಸೇಡಿಯಾಪು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಭುವನೇಶ್ವರಿ ನಾಗೇಶ್ ಶರ್ಮ ಮಠದಬೆಟ್ಟು, ವಿಜಯಲಕ್ಷ್ಮಿ ರಮೇಶ್ ನಾಯಕ್ ನಿಡ್ಯ, ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಧರ್ಮಾವತಿ ಸೇಡಿಯಾಪು, ರೇಣುಕಾ ಮುರಳೀಧರ್ ರೈ ಮಠಂತಬೆಟ್ಟು, ಸುಮಲತಾ ಬಾಬು ಗೌಡ ಭಂಡಾರದಮನೆ, ಸ್ಪೂರ್ತಿ ರಾಜಮಣಿ ರೈ ಮಠಂತಬೆಟ್ಟು, ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಭವ್ಯ ದಾಮೋದರ್ ಶೆಟ್ಟಿ ಮಠಂತಬೆಟ್ಟು ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯದ ಕುರಿತು ಮಾಹಿತಿ ನೀಡಿದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ರೇಖಾ ಅವರು ಸ್ತನ ಕ್ಯಾನ್ಸರ್ ಮತ್ತು ಹೆಚ್.ಪಿ.ವಿ. ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಹರಿಣಾಕ್ಷಿ ಕೈಪ ಪ್ರಾರ್ಥಿಸಿದರು.













