






ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಪಾರಂತಿ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.7ರಿಂದ 12ರ ತನಕ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಕಾರ್ಯಾಲಯದ ಉದ್ಘಾಟನೆ ಎ.3ರಂದು ಬೆಳಗ್ಗೆ ನಡೆಯಿತು.



ಗುಡ್ಡಪ್ಪ ಗೌಡ ಟಪಾಲುಕೊಟ್ಟಿಗೆ ಅವರು ಕಾರ್ಯಾಲಯ ಉದ್ಘಾಟಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಪ್ರಸಾದ್ ಉಡುಪ ಎಂ. ಪೂಜಾ ವಿಧಿವಿಧಾನ ನೆರವೇರಿಸಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನೇಮಿಚಂದ್ರ ಗೌಡ ಮುದ್ಯ ಅವರು, ಬ್ರಹ್ಮಕಲಶೋತ್ಸವದ ಕಾರ್ಯಾಲಯ ನಮಗೆ ಶಕ್ತಿ ಕೇಂದ್ರ ಇದ್ದಂತೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಈ ಕಾರ್ಯಾಲಯ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿ ಶುಭಹಾರೈಸಿದರು. ಮೊಕ್ತೇಸರರಾದ ಸುಧಾ ಡಿ.ರಾವ್ ದಾದುಕೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಗೋಪಾಲ ವಳಾಲುದಡ್ಡು, ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ನೀರಕಟ್ಟೆ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಸಂತೋಷ್ಕುಮಾರ್ ಜೈನ್ ಬಾರಿಕೆ, ದಾಮೋದರ ಗೌಡ ಶೇಡಿಗುತ್ತು, ಪ್ರಧಾನ ಕಾರ್ಯದರ್ಶಿ ವಸಂತಿಜಯಂತ ಬಿ.ಅತಿಕರಮಜಲು, ಕೋಶಾಧಿಕಾರಿ ಶ್ರೀಧರ ಪೂಜಾರಿ ಬರೆಮೇಲು ಕಾಂಚನ, ಜೊತೆ ಕಾರ್ಯದರ್ಶಿ ಬೇಬಿಗೋಪಾಲ ಬಾರಿಕೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸೋಮಸುಂದರ ಕೊಡಿಪಾನ, ಕಾರ್ಯದರ್ಶಿಗಳಾದ ಶರತ್ ಗೌಡ ಮುದ್ಯ, ಭವ್ಯಬಾಲಕೃಷ್ಣ ಶೆಟ್ಟಿ ಪಂಜಳ, ಕಾರ್ಯಾಲಯ ಸಮಿತಿ ಸಂಚಾಲಕ ವಿಶ್ವನಾಥ ಗೌಡ ಪಿಜಕ್ಕಳ, ಪ್ರಬಂಧಕ ಸೀತಾರಾಮ ಗೌಡ ಶೇಡಿಗುತ್ತು, ಸಂಯೋಜಕ ಅವಿನಾಶ್ ಉಪಾತಿಪಾಲು, ಪ್ರಮುಖರಾದ ವಸಂತ ಗೌಡ ಪಿಜಕ್ಕಳ, ತಿಮ್ಮಪ್ಪ ಗೌಡ ಉಪಾತಿಪಾಲು, ರುಕ್ಮಯ್ಯ ಗೌಡ ಪೂಯಿಲ, ಸುರೇಶ್ ನಂಜಳಿ, ಶಶಿಧರ ಗೌಡ ಮುದ್ಯ, ಮನೋಜ್ಕುಮಾರ್ ಸುಳ್ಯ ಮಣಿಕ್ಕಳ, ವಸಂತ ಗೌಡ ಕಾಂಚನ, ಸೀತಾರಾಮ ಶೇಡಿ, ವಾಸು ಡಿ.ದಡ್ಡು, ಶಿವರಾಮಪ್ರಸಾದ್ ಬಜತ್ತೂರು, ಗಂಗಾಧರ ಪಿ.ಎನ್.ನೆಕ್ಕರಾಜೆ, ಸೇಸಪ್ಪ ಗೌಡ ಉಪಾತಿಪಾಲು, ಗಣೇಶ್ ನಂಜಳಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರ್ವಹಿಸಿದರು.












