






ಪುತ್ತೂರು: ಸಾಮಾಜಿಕ ತಾಣದಲ್ಲಿ ಹರಿಡುವ ಕೆಲವೊಂದು ಸುಳ್ಳು ಸುದ್ದಿಗಳನ್ನು ಜನ ತಕ್ಷಣಕ್ಕೆ ನಂಬಿ ಬಿಡ್ತಾರೆ. ಕೆಲವೊಂದು ಫೇಕ್ ವೆಬ್ಗಳಲ್ಲಿ ಜನರನ್ನು ಯಾಮಾರಿಸುವ ರೀತಿಯಲ್ಲಿ ಸುಳ್ಳು ಸುದ್ದಿಗಳು ಬಿತ್ತರವಾಗುತ್ತದೆ. ಹೀಗೇ ಹರಿದಾಡುವ ಸುದ್ದಿಗಳು ನಿಜವೆಂದು ಹಿರಿಯ ಜೀವಗಳು ನಂಬಿ ಬಿಡ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಸೋಮವಾರ ಬೆಳಿಗ್ಗೆ ಶಾಸಕ ಅಶೋಕ್ ರೈ ಅವರಿಗೆ ಹಿರಿಯರೋರ್ವರು ಕರೆ ಮಾಡಿ “ ಶಾಸಕರೆ ವಯಸ್ಸಾದವರಿಗೆ ಸರಕಾರದಿಂದ 5 ಲಕ್ಷ ಸಿಗ್ತದಂತೆ ಹೌದಾ? ನನಗೆ ವಯಸ್ಸಾಗಿದೆ ನನಗೆ ಆ ಹಣ ಸಿಗಬೇಕಾದರೆ ಏನು ಮಾಡಬೇಕು ಎಂದು ಕೇಳಿ ಕರೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಾಸಕರು ಅದು ಸುಳ್ಳು ಸುದ್ದಿ ಆ ರೀತಿ ಹಣ ಯಾರಿಗೂ ಬರುವುದಿಲ್ಲ, ಯಾವ ಸರಕಾರವು ವಯಸ್ಸಾದವರಿಗೆ 5 ಲಕ್ಷ ಹಣ ಕೊಡುವುದಿಲ್ಲ. ವಯಸ್ಸಾದವರಿಗೆ ವೃದ್ದಾಪ್ಯ ವೇತನ ಮಾತ್ರ ಸರಕಾರದಿಂದ ಸಿಗ್ತದೆ ಎಂದು ಹೇಳಿ ಎಷ್ಟೇ ಸಮಾಧಾನ ಮಾಡಿದರೂ ಪಟ್ಟು ಬಿಡದ ಹಿರಿ ಜೀವವನ್ನು ಸಮಾಧಾನ ಪಡಿಸಿದ ಶಾಸಕರು ನಾನು ನಿಮಗೆ ನನ್ನಿಂದಾದ ಸಹಾಯ ಮಾಡುತ್ತೇನೆ , ಸಾಧ್ಯವಾದರೆ ನನ್ನ ಕಚೇರಿಗೆ ಬನ್ನಿ ಎಂದು ಕೇಳಿಕೊಂಡರು . ಆ ಬಳಿಕ ಕರೆ ಮಾಡಿದ ವ್ಯಕ್ತಿ ಥ್ಯಾಂಕ್ಸ್ ಹೇಳಿ ಕರೆ ಕಟ್ ಮಾಡಿದ್ದಾರೆ.












