ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆಗೆ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸ್ವಾಗತ

0

ಬಡಗನ್ನೂರು : ಹನುಮಗಿರಿ ಶ್ರೀ ಕೋದಂಡರಾಮ ದೇವರು ಮತ್ತು ಪಂಚಮುಖಿ ಶ್ರೀ ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ. 9, ರಿಂದ 12 ರವರೆಗೆ ನಡೆಯಲಿದ್ದು ಆ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಮುಖವಾದುದು ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರ ದೇವರ ಜನ್ಮಸ್ಥಳ ಅಯೋಧ್ಯೆಯಿಂದ ಶ್ರೀ ಬಾಲರಾಮ ದೇವರ ಮುಂಭಾಗದಿಂದ ಜ್ವಲಿಸಿದ ಶ್ರೀ ರಾಮ ಜ್ಯೋತಿಯು ಅಯೋಧ್ಯೆಯಿಂದ ಹೊರಟು ಆಂಜನೇಯ ಸ್ವಾಮಿಯ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಯ ಉರಿಯುವ ದೀಪಕ್ಕೆ ಸ್ಪರ್ಶ ಮಾಡಿ ಹೊರಟ ಶ್ರೀ ರಾಮಹನುಮ ಜ್ಯೋತಿಯು ಏ 7 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಸಾಗಿ ಬಂದಿತ್ತು. ಈ ಸಂಧರ್ಭದಲ್ಲಿ ಪಡುಮಲೆ ಮುಖ್ಯ ದ್ವಾರದಲ್ಲಿ ರಥಯಾತ್ರೆಗೆ ಭವ್ಯ ಸ್ವಾಗತ ಮಾಡಿ ಬ್ಯಾಂಡ್ ವಾಧ್ಯ ಘೋಷ ಹಾಗೂ ಪೂರ್ಣ ಕುಂಭ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ. ಯಚ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ನಿಕಟಪೂರ್ವ ಅದ್ಯಕ್ಷ ಮನೋಜ್ ರೖೆ ಪೇರಾಲು, ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ನಿಕಟಪೂರ್ವ ಸದಸ್ಯರು, ಹಾಗೂ ಹನುಮಗಿರಿ ಶ್ರೀ ಕೋದಂಡರಾಮ ದೇವರು ಮತ್ತು ಪಂಚಮುಖಿ ಶ್ರೀ ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಸಮಿತಿ ಸದಸ್ಯರು ಮತ್ತು ಊರ ಭಕ್ತಾದಿಗಳು ಭಾಗವಹಿಸಿದ್ದರು.

ಆರಂಭದಲ್ಲಿ ಪಡುಮಲೆ ವರಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ, ಸರ್ವಶಕ್ತಿ ಭಜನಾ ಮಂಡಳಿ ಪಡುಮಲೆ ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಹಾಗೂ  ಶ್ರೀ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಪೆರೀಗೇರಿ ಇದರ  ಸದಸ್ಯರಿಂದ ಶ್ರೀ ರಾಮನಾಮ ಮಂತ್ರ ಪಠಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here