






ಪುತ್ತೂರು:ದಕ್ಷಿಣ ಕನ್ನಡದ ಕಾರಣಿಕ ಹಾಗೂ ಭಕ್ತರ ಆಕರ್ಷಣೀಯ ಕ್ಷೇತ್ರವಾದ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಏ.9ರಿಂದ 12ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯಲಿದ್ದು,ಏ.8ರಂದು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.



ಹೊರಕಾಣಿಕೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ನಡೆದ ಮೆರವಣಿಗೆಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಆರಂಭದಲ್ಲಿ ದೇವಳದ ಸತ್ಯಧರ್ಮ ನಡೆಯಲ್ಲಿ ಅರ್ಚಕ ಹರೀಶ್ ಭಟ್ ವಿಶೇಷ ಪ್ರಾರ್ಥನೆ ಮಾಡಿ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರಿಗೆ ಪ್ರಸಾದ ನೀಡಿದರು.ದೇವಳದ ರಾಜಗೋಪುರದ ದ್ವಾರದ ಎದುರು ಹೊರಕಾಣಿಕೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪ್ರಮುಖರಿಗೆ ಕೇಸರಿ ಶಲ್ಯ ನೀಡಿ ಗೌರವಿಸಿದರು.ದರ್ಬೆವರೆಗೆ ಪಾದಯಾತ್ರೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ವಿವಿಧ ತಂಡಗಳಿಂದ ಕುಣಿತ ಭಜನೆ, ವಾದ್ಯ ಘೋಷ, ಚೆಂಡೆಯ ಸದ್ದು, ಕಲ್ಲಡ್ಕದ ಗೊಂಬೆ ಬಳಗದೊಂದಿಗೆ ಮತ್ತು ಕಲಶವನ್ನು ಹಿಡಿದ ಮಹಿಳೆಯರು ಸಾಗಿದರು.ದರ್ಬೆಯಿಂದ ವಾಹನಗಳ ಮೂಲಕ ಈಶ್ವರಮಂಗಲಕ್ಕೆ ಬಂದು ಸಂಜೆ 6 ಗಂಟೆಗೆ ಹನುಮಗಿರಿ ಕ್ಷೇತ್ರಕ್ಕೆ ಹೊರೆಕಾಣಿಕೆ ಪ್ರವೇಶಗೊಂಡಿತು.ಮೆರವಣಿಗೆಯಲ್ಲಿ ಹಸಿರುಹೊರೆಕಾಣಿಕೆ ತುಂಬಿದ ಹಲವು ವಾಹನಗಳು ಸರತಿ ಸಾಲಿನಲ್ಲಿ ಮುಂದೆ ಸಾಗಿದ್ದು ಹನುಮಗಿರಿಯಲ್ಲಿ ಉಗ್ರಾಣದಲ್ಲಿ ಹೊರೆಕಾಣಿಕೆಯನ್ನು ಇರಿಸಲಾಯಿತು.




ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಯು.ಆರ್.ಪ್ರಾರ್ಪಟೀಸ್‌ನ ಉಜ್ವಲ್ ಪ್ರಭು,ನಗರ-ಗ್ರಾಮ ಸಮಿತಿ ರಚನಾ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಶ್ರೀ ರಾಮ ಹನುಮ ಜ್ಯೋತಿ ರಥಯಾತ್ರೆ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು,ಸಮಿತಿ ಉಪಾಧ್ಯಕ್ಷರಾದ ಭಾಮಿ ಅಶೋಕ್ ಶೆಣೈ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ.ನಾರಾಯಣ ರೆಂಜ, ಎಸ್.ಅಪ್ಪಯ್ಯ ಮಣಿಯಾಣಿ,ನಹುಷ ಪಳನೀರು,ಅರುಣ್ ಕುಮಾರ್ ಪುತ್ತಿಲ,ಪುತ್ತೂರು ನಗರ ಸಮಿತಿ ಸಂಚಾಲಕ ಲೋಕೇಶ್ ಹೆಗ್ಡೆ, ನಾರಿಕೇಳ ನಗರ ಸಮಿತಿ ಸಂಚಾಲಕ ಸುಂದರ ಪೂಜಾರಿ ಬಡಾವು, ಸುರೇಶ್ ಅತ್ರಿಮಜಲು, ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಜೀವಂಧರ್ ಜೈನ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ,ಸತೀಶ್ ನಾಯಕ್ ಪರ್ಲಡ್ಕ,ಇಂದುಶೇಖರ, ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ,ಸುಂದರ ಪೂಜಾರಿ ಬಡಾವು, ಗೋಪಾಲಕೃಷ್ಣ ಹೇರಳೆ, ಹರೀಶ್ ದೋಳ್ಪಾಡಿ, ಶ್ರೀಧರ ಪಟ್ಲ, ವಿಶ್ವನಾಥ ಗೌಡ ಬನ್ನೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಽಕಾರಿ ಶಶಿಧರ್, ಅಜಿತ್ ರೈ ಹೊಸಮನೆ, ರಾಧಾಕೃಷ್ಣ ನಂದಿಲ, ನವೀನ್ ರೈ ಕೈಕಾರ, ಲಕ್ಷ್ಮಣ ಬೈಲಾಡಿ, ಶಶಿಧರ್ ನಾಯಕ್, ಕಿರಣ್ ಬಲ್ನಾಡು, ಯುವರಾಜ್ ಪೆರಿಯತ್ತೋಡಿ, ಜಯರಾಮ್ ರೈ ಕುರಿಯ, ರಾಜೇಶ್ ರೈ ಪರ್ಪುಂಜ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸೀತಾರಾಮ ಶೆಟ್ಟಿ ಕಂಬಳತಡ್ಡ, ಮಹಿಳಾ ಸಮಿತಿ ಪ್ರಮುಖರಾದ ವಿದ್ಯಾ ಗೌರಿ, ಉಷಾ ಮುಳಿಯ, ಹೇಮಾ ಜಯರಾಮ್, ನಾಗೇಂದ್ರ ಬಾಳಿಗ, ಶಿವಪ್ರಸಾದ್ ಮಯ್ಯ, ವಿಶ್ವನಾಥ ಕುಲಾಲ್, ರಾಮಣ್ಣ ಗೌಡ ಗುಂಡೋಳೆ, ಉದಯ ಹೆಚ್., ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉದ್ಘೋಷಕರಾಗಿದ್ದರು.

ಕುರಿಯ ಗ್ರಾಮ ಸಮಿತಿಯಿಂದ ಶ್ರೀರಾಮಲಕ್ಷ್ಮಣ ಸೀತೆ, ಹನೂಮಂತ
ಹನುಮಗಿರಿ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರುಹೊರೆಕಾಣಿಕೆಯಲ್ಲಿ ಕುರಿಯ ಗ್ರಾಮ ಸಮಿತಿಯಿಂದ ಶ್ರೀರಾಮಲಕ್ಷ್ಮಣ ಸೀತೆ, ಹನೂಮಂತನ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡದ್ದು ವಿಶೇಷ ಆಕರ್ಷಣೆ ಆಗಿತ್ತು.ಶ್ರೀರಾಮನಾಗಿ ಬಹುಮುಖ ಪ್ರತಿಭೆ ಜ್ಞಾನ ರೈ ಕುರಿಯ, ಹನೂಮಂತನಾಗಿ ಆಜ್ಞಾ ರೈ ಕುರಿಯ, ಸೀತೆಯಾಗಿ ತನ್ವಿ ಶೆಟ್ಟಿ ಸೂರಂಬೈಲು, ಲಕ್ಷ್ಮಣನಾಗಿ ವಿನ್ಯಾ ರೈ ಕುರಿಯ ಅವರು ವೇಷ ಧರಿಸಿ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿದರು.ಸುಜಿತ್ ಕಜೆ ಸ್ತಬ್ದಚಿತ್ರದ ಸಾರಥಿಯಾಗಿ ಸಹಕರಿಸಿದರು.

ಸುದ್ದಿಯಲ್ಲಿ ನೇರಪ್ರಸಾರ:
ಪುತ್ತೂರುನಿಂದ ಹನುಮಗಿರಿ ತನಕದ ಹಸಿರು ಹೊರೆ ಕಾಣಿಕೆ ಮೆರವಣಿಗೆಯ ನೇರ ಪ್ರಸಾರ ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದಿತ್ತು.











