ದ್ವಿತೀಯ ಪಿಯುಸಿ ವಿವೇಕಾನಂದ ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ

0

*ಮನ್ಮಿತ ಹಾಗೂ ಬಿಂದು ಎಚ್. ಆರ್ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ
*ಕಲಾ ವಿಭಾಗದ ರೂಪಶ್ರೀ – 584 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ
*ತಾಲೂಕಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
* 224 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ 100 ಅಂಕಗಳು

ಪುತ್ತೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ (ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ. ಕೆ ದಂಪತಿ ಪುತ್ರ) 598 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರಾಂಕ್ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದ ಮನ್ಮಿತ (ಕಡೇಶಿವಾಲಯದ ವಸಂತ ಯು ಹಾಗೂ ಚಿತ್ರಾವತಿ ದಂಪತಿ ಪುತ್ರಿ) ಹಾಗೂ ಬಿಂದು ಎಚ್. ಆರ್ (ಕೊಡಗು ಜಿಲ್ಲೆಯ ಡಿ .ಸಿ ರವಿಕುಮಾರ್ ಹಾಗೂ ಹೆಚ್. ಆರ್ ಪವಿತ್ರ ದಂಪತಿ ಪುತ್ರಿ) 596 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ರೂಪಶ್ರೀ (ಪುತ್ತೂರು, ನೆಹರು ನಗರದ ಆನಂದ ಗೌಡ ಕೆ ಹಾಗೂ ಪಿ. ದಾಜಮ್ಮ ದಂಪತಿ ಪುತ್ರಿ) ಇವರು 584 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.


ವಿಜ್ಞಾನ ವಿಭಾಗದಲ್ಲಿ ತೀರ್ಥ ಶೆಟ್ಟಿ (ಬಂಟ್ವಾಳ ತಾಲೂಕಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿ ಪುತ್ರಿ) 595, ಶ್ರೀಜಾ (ಬಂಟ್ವಾಳ ತಾಲೂಕಿನ ಸದಾನಂದ ಹಾಗೂ ವನಿತಾ ದಂಪತಿ ಪುತ್ರಿ) 594 , ಪ್ರಾಪ್ತಿ ಆಳ್ವ (ಬಂಟ್ವಾಳ ತಾಲೂಕಿನ ಸರಪಾಡಿಯ ಪ್ರವೀಣ ಆಳ್ವ ಹಾಗೂ ಸವಿತಾ ಆಳ್ವಾ ದಂಪತಿ ಪುತ್ರಿ) 593, ಮಂಗಳಾಮೃತ ಕೆ. ಆರ್ ( ಸುಳ್ಯ ತಾಲೂಕಿನ ರವಿರಾಜ ಕೆ. ಹಾಗೂ ವಾಣಿಕುಮಾರಿ ಎ. ದಂಪತಿ ಪುತ್ರಿ) 592 ಹಾಗೂ ಪ್ರಸ್ತುತಿ ಪಿ .(ಕಾಸರಗೋಡಿನ ಉದಯ ಶಂಕರ ಭಟ್ ಪಿ .ಕೆ ಹಾಗೂ ಶ್ರೀವಾಣಿ ಪಿ. ದಂಪತಿ ಪುತ್ರಿ) ಅದಿತಿ ಯು (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ ದಂಪತಿ ಪುತ್ರಿ) 590 ಅಂಕಗಳನ್ನು ಪಡೆದುಕೊಂಡಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಪ್ರಮಥ ಎಂ. ಭಟ್ 594 (ಪುತ್ತೂರು ತಾಲೂಕಿನ ರವಿ ನಾರಾಯಣ ಎಂ ಹಾಗೂ ಶರಾವತಿ ರವಿ ನಾರಾಯಣ ದಂಪತಿ ಪುತ್ರಿ), ಶ್ರೀ ವಿದ್ಯಾ ಜೆ 593 (ಬಂಟ್ವಾಳ ತಾಲೂಕಿನ ಪ್ರಕಾಶ್ ನಾರಾಯಣ ಜೆ ಹಾಗೂ ರಮ್ಯಾ ದಂಪತಿ ಪುತ್ರಿ) , ಸುಶ್ಮಿತಾ ಬಿ 592 (ಬಾಲಕೃಷ ನಾಯಕ್ ಬಿ ಹಾಗೂ ರೇವತಿ ಎಂ ದಂಪತಿ ಪುತ್ರಿ) ಸಹನ ಮಳಿ 591 (ಪುತ್ತೂರು ತಾಲೂಕಿನ ವೆಂಕಟ ಕೃಷ ಎಂ. ಎನ್ ಹಾಗೂ ವೀಣಾ ಸರಸ್ವತಿ ದಂಪತಿ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.


ಕಲಾ ವಿಭಾಗದಲ್ಲಿ ಪ್ರೀತಿ ಸುನಿಲ್ ಚಿಲ್ಲಾಲ್ 582 (ಹುಬ್ಬಳ್ಳಿಯ ಸುನಿಲ್ ಚಿಲ್ಲಾಲ್ ಹಾಗೂ ರೇಷ್ಮಾ ಸುನಿಲ್ ಚಿಲ್ಲಾಲ್ ದಂಪತಿ ಪುತ್ರಿ) ಬಿಂದು ಕೆ .ಜೆ 580 (ಸುಳ್ಯ ತಾಲೂಕಿನ ಕೆ. ಎನ್ ಜಗದೀಶ ಹಾಗೂ ಶೋಭಾ ಕೆ. ಎಚ್ ದಂಪತಿ ಪುತ್ರಿ), ಕಿರಣ್ ಆರ್ 577 (ಮೈಸೂರಿನ ರವಿಕುಮಾರ್ ಹಾಗೂ ಮಂಜುಳ ದಂಪತಿ ಪುತ್ರ) , ಶೋಭಿತಾ ಸಿ. ಎಚ್ 571 .(ಬಂಟ್ವಾಳ, ಕನ್ಯಾನ ಗ್ರಾಮದ ಗಣರಾಜ ಸಿ. ಎಚ್ ಹಾಗೂ ಸವಿತಾ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಒಟ್ಟು 820 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 330 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದರೊಂದಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಽಕ ರಾಂಕ್‌ಗಳನ್ನು ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಪಾತ್ರವಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here