ಏ.22ರಿಂದ 27: ಕೊರಮೇರು ಕುಟುಂಬದ ಆದಿಮನೆ ನವೀಕರಿಸಿದ ದೈವಸ್ಥಾನದಲ್ಲಿ ಪ್ರತಿಷ್ಠೆ, ನೇಮೋತ್ಸವ

0

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕೊರಮೇರುನಲ್ಲಿರುವ ಕೊರಮೇರು ಕುಟುಂಬದ ಆದಿಮನೆಯ ನವೀಕರಿಸಿದ ದೈವಸ್ಥಾನದಲ್ಲಿ ಶ್ರೀ ಹಳ್ಳತ್ತಾಯ ದೈವ ಮತ್ತು ಪರಿವಾರ ದೈವಗಳು ಹಾಗೂ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಗುತ್ತಿನ ದೈವ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ, ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಏ.22ರಿಂದ 27ರ ತನಕ ನಡೆಯಲಿದೆ ಎಂದು ಕೊರಮೇರು ಆದಿಮನೆಯ ಯಜಮಾನರಾದ ರಾಮಕೃಷ್ಣ ಗೌಡ ಕೊರಮೇರು, ಕುಟುಂಬದ ಹಿರಿಯರಾದ ಲಿಂಗಪ್ಪ ಗೌಡ ಕೊರಮೇರು ಹಾಗೂ ಕೊರಮೇರು ಕುಟುಂಬಸ್ಥರು ತಿಳಿಸಿದ್ದಾರೆ.


ಏ.22ರಂದು ಪೂರ್ವಾಹ್ನ ನಾಗತಂಬಿಲ, ಸಂಜೆ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ಬಿಂಬಾಧಿವಾಸ ರಕ್ಷೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.


ಏ.23ರಂದು ಪೂರ್ವಹ್ನ ಗಣಹೋಮ, ಕಲಶಪೂಜೆ ನಡೆದು 8.27ರ ನಂತರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ,ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಪಾಲ ಬಲಿ, ಬಿಂಬಾಧಿವಾಸ ರಕ್ಷೆ ನಡೆಯಲಿದೆ.


ಏ.24ರಂದು ಪೂರ್ವಾಹ್ನ ಗಣಹೋಮ, ಕಲಶಪೂಜೆ ನಡೆದು 8.32ರ ನಂತರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಏ.26ರಂದು ಪೂರ್ವಾಹ್ನ ಶ್ರೀ ಹಳ್ಳತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಇಳಿಸಿ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, 3ರಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ, ಗುತ್ತಿನ ದೈವ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಭಂಡಾರ ಇಳಿಸುವುದು, ಸಂಜೆ ಶ್ರೀ ಶಿರಾಡಿ ದೈವ ಮತ್ತು ಪರಿವಾರ ದೈವಗಳ ಭಂಡಾರ ಇಳಿಸಿ ಆದಿಮನೆಗೆ ತರುವುದು, ಸಂಜೆ 5ರಿಂದ ನೇಮೋತ್ಸವ ಆರಂಭ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.


ಏ.27ರಂದು ಪೂರ್ವಾಹ್ನ 6ರಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ 2 ಗಂಟೆಯಿಂದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here