ಚೇತನ್ ಪುತ್ತೂರು ಹಾಡಿರುವ ಲಿಂಗಸ್ವರೂಪ ಕನ್ನಡ ಭಕ್ತಿಗೀತೆ ಲೋಕಾರ್ಪಣೆ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕುರಿತು ರೂಪುಗೊಂಡಿರುವ “ಲಿಂಗಸ್ವರೂಪ” ಕನ್ನಡ ಭಕ್ತಿಗೀತೆಯ ಬಿತ್ತಿಪತ್ರವನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಬಳಿಯಲ್ಲಿ ಬಿಡುಗಡೆ ಮಾಡಲಾಯಿತು.

ಯುವ ಉದಯೋನ್ಮುಖ ಹಾಡುಗಾರರಾದ ಚೇತನ್ ಪುತ್ತೂರು ಅವರು ಹಾಡಿರುವ ಈ ಭಕ್ತಿಗೀತೆಯನ್ನು ಸಾಹಿತಿ ನವೀನ್ ಎಂ ರಚಿಸಿದ್ದು, ಭಕ್ತರ ಮನಸೆಳೆಯುವಂತಿರುವ ಈ ಆಲ್ಬಮ್ ಈಗಾಗಲೇ ಗಮನ ಸೆಳೆಯುತ್ತಿದೆ. ಇದೇ ಏಪ್ರಿಲ್ 11ರಂದು ಈ ಭಕ್ತಿಗೀತೆಯ ಆಲ್ಬಮ್ ಬಿಡುಗಡೆಯಾಗಿದ್ದು, ಈ ಸಂದರ್ಭ ಬಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ., ಹಾಗೂ ಸುಭಾಷ್ ಚಂದ್ರ, ಚಂದ್ರಶೇಖರ ಗೌಡ, ಪ್ರಮುಖ್ ಚಿಕ್ಕಪುತ್ತೂರು, ಚಿಂತನ್ ಚಿಕ್ಕಪುತ್ತೂರು, ಶಮಂತ್ ಚಿಕ್ಕಪುತ್ತೂರು, ಗಾಯಕ ಚೇತನ್ ಪುತ್ತೂರು, ಸಾಹಿತಿ ನವೀನ್ ಎಂ ಹಾಗೂ ತಂಡದ ಸದಸ್ಯರಾದ ಗಣೇಶ್ ಕೆಯ್ಯುರು ಮತ್ತು ವೆಂಕಟೇಶ್ ಕೆಯ್ಯುರು ಉಪಸ್ಥಿತರಿದ್ದರು.

ಚೇತನ್ ಪುತ್ತೂರು ಅವರು ಕಳೆದ 17 ವರ್ಷಗಳಿಂದ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಕರಿಕಲ್ಲ ಕೊರಗಜ್ಜ, ಮಲ್ಲದ ಮಹಾತಾಯಿ, ಪುತ್ತೂರು ಪುರದೀಶ ಮೊದಲಾದ ಭಕ್ತಿಗೀತೆಗಳ ಮೂಲಕ ಜನಮನ ಗೆದ್ದಿದ್ದಾರೆ. ಈ ಹೊಸ ಭಕ್ತಿಗೀತೆ ಅವರ ಆರನೇ ಕೃತಿಯಾಗಿರುವುದು ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಚೇತನ್ ಪುತ್ತೂರು ಅವರ ಸಾಧನೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸುಗಳನ್ನು ಗಳಿಸಲಿ ಎಂದು ಹಾರೈಸಿದರು. ಭಕ್ತಿಗೀತೆಯನ್ನು ನೀರನಾದ ಕ್ರಿಯೇಶನ್ ನಲ್ಲಿ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here