ನೆಲ್ಯಾಡಿ-ಕೋಲ್ಪೆ ’ ಮಖಾಂ ಉರೂಸ್ 2026’ ಉದ್ಘಾಟನೆ

0

ನೆಲ್ಯಾಡಿ: ಬದ್ರಿಯಾ ಜುಮ್ಮಾ ಮಸೀದಿ ಸಯ್ಯದ್ ಮಲ್ಹರ್ ವಲಿಯುಲ್ಲಾಹಿ (ಖ.ಸಿ.) ದರ್ಗಾ ಶರೀಫ್ ಕೋಲ್ಪೆ-ನೆಲ್ಯಾಡಿ ಇದರ ವತಿಯಿಂದ ಮೂರು ದಿನ ನಡೆಯುವ ಕೋಲ್ಪೆ ಮಖಾಂ ಉರೂಸ್ 2026ರ ಉದ್ಘಾಟನಾ ಸಮಾರಂಭ ಏ.17ರಂದು ರಾತ್ರಿ ನಡೆಯಿತು.


ಗೋಳಿತ್ತೊಟ್ಟು ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ಉದ್ಘಾಟಿಸಿದರು. ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷರಾದ ಬಿ.ಎಸ್.ಬಾವಾ ತಂಙಳ್ ದು:ವಾ ನೆರವೇರಿಸಿದರು. ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಕಕ್ಕಿಂಜೆ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮುಖ್ಯ ಪ್ರಭಾಷಣ ಮಾಡಿದರು. ಅತಿಥಿಗಳಾದ ಕೋಲ್ಪೆ ಮದರಸ ನೂರಾನಿಯಾ ಮದರಸದ ಮುಅಲ್ಲಿಂ ಆದಂ ದಾರಿಮಿ, ಕೋಲ್ಪೆ ಬಿಜೆಎಂ ಮಾಜಿ ಅಧ್ಯಕ್ಷ ಎಂ.ಆದಂ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷ ಕೆ.ಎಂ.ಮಹಮ್ಮದ್, ಕೋಲ್ಪೆ ಭರವಸೆಯ ಬೆಳಕು ತಂಡದ ಪ್ರಧಾನ ಕಾರ್ಯದರ್ಶಿ ಯು.ಕೆ.ಉಮ್ಮರ್, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಶಾಖೆ ಅಧ್ಯಕ್ಷ ಎಂ.ಕೆ.ರಹೀಂ, ಕೋಲ್ಪೆ ಬಿಶಾರ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ಅನ್ಸಾರ್ ಶೇಖ್, ಕೋಲ್ಪೆ ಬ್ರದರ‍್ಸ್ ತಂಡದ ಕೆ.ಎಮ್.ಜಮಾಲ್, ಕೋಲ್ಪೆ ಬಿಜೆಎಂ ಆಡಳಿತ ಸಮಿತಿ ಸದಸ್ಯ ಕೆ.ಎಮ್.ಹನೀಫ್, ಕೋಲ್ಪೆ ಬಿಜೆಎಂ ವಕ್ಫ್ ಇನ್‌ಚಾರ್ಜ್ ಕೆ.ಎಸ್.ಶರೀಫ್ ಕೋಲ್ಪೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೋಲ್ಪೆ ಖಲಂದರ್ ಷಾ ದಫ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಲ್ಪೆ ಬಿಜೆಎಂ ಕಾರ್ಯದರ್ಶಿ ರಂಝಾನ್ ಸಾಹೇಬ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಮೀರ್ ಅರ್ಶದಿ ವಂದಿಸಿದರು. ಕೋಲ್ಪೆ ಬಿಜೆಎಂ ಅಧ್ಯಕ್ಷ ಅಬ್ದುಲ್ ಶುಕೂರು ಕೆ.ಜಿ.ಎನ್. ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಇಂದು ಸಮಾರೋಪ;
ಮೂರು ದಿನಗಳ ಉರೂಸ್ ಸಮಾರಂಭದ ಸಮಾರೋಪ ಏ.19ರಂದು ರಾತ್ರಿ ನಡೆಯಲಿದೆ. ಅಸ್ಸಯ್ಯದ್ ಇಬ್ರಾಹೀಂ ಬಾದುಷಾ ತಂಙಳ್ ಅಝ್‌ಹರಿ ಅಲ್-ಮುರ್ಶಿದಿ ಅಣೆಕ್ಕಲ್ ದು:ಆ ಆಶೀರ್ವಚನ ನೀಡಲಿದ್ದಾರೆ. ಕೋಲ್ಪೆ ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here