ಸುಳ್ಯ ನಗರ ನದಿಗೆ ಸೇರುವ ತ್ಯಾಜ್ಯ ಗಳನ್ನು ಐ & ಡಿ ತoತ್ರಜ್ಞಾನ ಅಳವಡಿಸಿ ಸಂಸ್ಕರಿಸಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಅನುದಾನ ಒದಗಿಸಿ ಅನುಷ್ಠಾನ ಗೊಳಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ

0

ಪುತ್ತೂರು :ಸುಳ್ಯ ನಗರವು ಏತ್ತರ,ತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು ನಗರ ವ್ಯಾಪ್ತಿ ಯುದ್ಧಕ್ಕೂ ಪಯಶ್ವಿನಿ ನದಿ, ಕಂಡಡ್ಕ ಹೊಳೆ, ಕನಿಕರ ಪಳ್ಳ ಹಳ್ಳ ಹರಿದು ಹೋಗುವ ವಿಶಿಷ್ಟ ಭೋಗೋಳಿಕ ಹಿನ್ನಲೆಯ ಪ್ರದೇಶ ವಾಗಿರುತ್ತದೆ ಚರಂಡಿ, ಕಾಲುವೆ ಗಳಲ್ಲಿ ಹರಿಯುವ ಮಲಿನ ನೀರುಗಳು ಅಲ್ಲಲ್ಲಿ ಹೊಳೆಗೆ ಸೇರುತ್ತಿದ್ದು ಸದ್ರಿ ತ್ಯಾಜ್ಯ ಗಳು ನದಿಗೆ ಸೇರುವ ನಾಲ್ಕೈದು ಕಡೆಗಳಲ್ಲಿ ಐ & ಡಿ ತಂತ್ರಜ್ಞಾನ ದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕಡಿಮೆ ಜಾಗದಲ್ಲಿ ನಿರ್ಮಿಸುವ ಮಿನಿ ಪ್ಲಾಂಟ್,ಶುದ್ದೀಕರಣ ಘಟಕಗಳನ್ನು ಸ್ಥಾಪಿಸಲು ಅನುದಾನ ಒದಗಿಸಿ ಕಾಮಗಾರಿ ಅನುಷ್ಠಾನ ಗೊಳಿಸುವಂತೆ ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ರವರಿಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ ಮಾಡಿದರು.

ಈ ಯೋಜನೆಗಳು ಈಗಾಗಲೇ ಕೆಯುಡಬ್ಲ್ಯೂಎಸ್ ಮಾರ್ಗ ದರ್ಶನದಲ್ಲಿ ಕೆಯುಐಡಿಎಫ್ ಸಿ ಮೂಲಕ ಬೇರೆ ಬೇರೆ ನಗರಗಳಲ್ಲಿ ಅನುಷ್ಠಾನ ಗೊಳ್ಳುತ್ತಿದ್ದು ಇದೇ ಮಾದರಿಯ ಯೋಜನೆ ಶಿಕ್ಷಣ ಕಾಶಿ ಎನಿಸಿಕೊಂಡಿರುವ, ರಬ್ಬರ್, ಅಡಿಕೆ ಮೊದಲಾದ ವಾಣಿಜ್ಯ ಕೇಂದ್ರ, ಪ್ರವಾಸಿ ತಾಣ ಕೊಡಗು ಜಿಲ್ಲೆ, ಕೇರಳ ರಾಜ್ಯದ ಗಡಿ ಪ್ರದೇಶವಾಗಿರುವ ಸುಳ್ಯ ನಗರಕ್ಕೆ ಅತೀ ಅಗತ್ಯ ವಾಗಿರುತ್ತದೆ ಎಂದು ಸಚಿವರಿಗೆ ಕೆ. ಎಂ. ಮುಸ್ತಫ ಮ ನವರಿಕೆ ಮಾಡಿ ಕೊಟ್ಟರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ನೆಟ್ ವರ್ಕ್ ನಲ್ಲಿ ಸುಳ್ಯ ನಗರವನ್ನು ಸೇರಿಸಲು ಕ್ರಮ ವಹಿಸುವುದಾಗಿ ಮತ್ತು ಈ ಬಗ್ಗೆ ಪರಿಶೀಲಿಸಲು ತಜ್ಞರ ತಂಡ ವನ್ನು ಕಳುಹಿಸುವುದಾಗಿ ತಿಳಿಸಿದರು.

ಏನಿದು ಇಂಟರ್ ಸೆಪ್ಸೆನ್ ಮತ್ತು ಡೈವರ್ಷನ್ ( ಐ & ಡಿ ) ತಂತ್ರಜ್ಞಾನ
ನದಿ, ಕಾಲುವೆಗಳ ಮಾಲಿನ್ಯ ಕಡಿಮೆ ಮಾಡಲು ಹೊರ ಚರಂಡಿ, ತೋಡು, ಹಳ್ಳ ಗಳ ಮೂಲಕ ನದಿಗೆ ಸೇರುವ ಮಲಿನ ಗಳನ್ನು ಜೈವಿಕ ಅಥವಾ ಇನ್ನಿತರ ತಾಂತ್ರಿಕತೆ ಬಳಸಿ ವಿವಿಧ ಕಡೆಗಳಲ್ಲಿ ತಡೆ ಹಿಡಿದು, ಪೈಪ್ ಲೈನ್ ಟ್ಯಾಂಕ್ ಅಳವಡಿಸಿ ಕಡಿಮೆ ಜಾಗದಲ್ಲಿ ಮಿನಿ ಶುದ್ದೀಕರಣ ಘಟಕ ಸ್ಥಾಪಿಸಿ ತ್ಯಾಜ್ಯ ಗಳನ್ನು ಒಳ ಚರಂಡಿ ಪ್ಲಾಂಟ್ ಗಳಿಗೆ ಸಾಗಿಸುವುವುದು ಇದರಿಂದ ನದಿ ಮಾಲಿನ್ಯ ಕಡಿಮೆಯಾಗುತ್ತದೆ, ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯದ ರಕ್ಷಣೆ ಸಾಧ್ಯ ಈಗಾಗಲೇ ಸಣ್ಣ ಸಣ್ಣ ಪಟ್ಟಣಗಳಲ್ಲಿ ಅನುಷ್ಠಾನ ಗೊಳ್ಳುತ್ತಿದೆ
ಎಂದು ಕೆ. ಎಂ. ಮುಸ್ತಫಾ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here