ವಿದ್ಯಾರ್ಥಿ ಮಿತ್ರ ಟ್ಯೂಷನ್ ಕ್ಲಾಸ್ ಜ್ಞಾನ ಜಂಕ್ಷನ್ ಬೇಸಿಗೆ ಶಿಬಿರ ಉದ್ಘಾಟನೆ

0

ಪುತ್ತೂರು:ಬೊಳ್ವಾರು ರಿಲಯನ್ಸ್ ಸ್ಮಾರ್ಟ್ ಎದುರುಗಡೆಯ ಸೂರ್ಯಪ್ರಭಾ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿ ಮಿತ್ರ ಟ್ಯೂಷನ್ ಕ್ಲಾಸ್  ಆಶ್ರಯದಲ್ಲಿ ಜ್ಞಾನ ಜಂಕ್ಷನ್ ಬೇಸಿಗೆ ಶಿಬಿರ ಕಾರ್ಯಕ್ರಮವು ನಡೆಯಿತು.

ಮಕ್ಕಳು ಕಲಿತು ಜ್ಞಾನವಂತರಾದಾಗ ಆಯೋಜಕರ ಶ್ರಮಕ್ಕೆ ಪ್ರತಿಫಲ-ವಸಂತ್ ನಾಯಕ್:
ಬೊಳ್ವಾರು ಸೂರ್ಯಪ್ರಭಾ ಕಾಂಪ್ಲೆಕ್ಸ್ ಮಾಲಕ ವಸಂತ್ ಕಾಮತ್ ರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಚಿಣ್ಣರು ಬೆಳೆಯಬೇಕು, ಮುಂದೆ ಹೋಗಬೇಕು, ಶಾಲೆಯೂ ನಡೀಬೇಕು ಜೊತೆಗೆ ಆರ್ಥಿಕ ಶಕ್ತಿಯೂ ಬೇಕಾಗುತ್ತದೆ. ಶಿಬಿರವನ್ನು ಏರ್ಪಡಿಸಿದ ಆಯೋಜಕರ ಶ್ರಮಕ್ಕೆ ಪ್ರತಿಫಲ ಸಿಗಬೇಕಾದರೆ ಮಕ್ಕಳು ಕಲಿತು ಜ್ಞಾನವಂತರಾದಾಗ ಮಾತ್ರ ಸಾಧ್ಯ ಎಂದರು.

ಶಾರೀರಿಕವಾಗಿ, ಮಾನಸಿಕವಾಗಿ ಕುಗ್ಗುವುದನ್ನು ತಡೆಯಲು, ಮಕ್ಕಳಲ್ಲಿ ಜ್ಞಾನ ಕೇಂದ್ರೀಕರಿಸಲು ಇಂತಹ ಚಟುವಟಿಕೆಗಳು ಅಗತ್ಯ-ಪ್ರಸನ್ನ ಬಲ್ಲಾಳ್:
ಕೀರ್ತನಾ ಡೆವಲಪರ್ಸ್ ನ ಪ್ರಸನ್ನ ಬಲ್ಲಾಳ್ ಮಾತನಾಡಿ, ವಿದ್ಯಾರ್ಥಿ ಮಿತ್ರ ಸಂಸ್ಥೆ ಪ್ರತಿ ವರ್ಷ ಹೊಸ ಹೊಸ ಚಟುವಟಿಕೆಗಳನ್ನು ಬೇಸಿಗೆ ಶಿಬಿರದಲ್ಲಿ ಪರಿಚಯಿಸುತ್ತಿದೆ. ಈ ಬಾರಿ ಜ್ಞಾನ ಜಂಕ್ಷನ್ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ರಜೆಯಲ್ಲಿ ಸಣ್ಣ ಮಕ್ಕಳು ಮನೆಯಲ್ಲಿ ಮೊಬೈಲ್ ಹಾಗೂ ಟಿವಿಯಲ್ಲಿ ಮಗ್ನರಾಗಿ ಅವರು ಶಾರೀರಿಕವಾಗಿ, ಮಾನಸಿಕವಾಗಿ ಕುಗ್ಗುವುದನ್ನು ತಡೆಯಲು ಮಕ್ಕಳಲ್ಲಿ ಜ್ಞಾನ ಕೇಂದ್ರೀಕರಿಸಲು ಇಂತಹ ಚಟುವಟಿಕೆಗಳು ಅಗತ್ಯ. ಮಕ್ಕಳು ಶಿಬಿರದಲ್ಲಿನ ಪ್ರತಿ ಸೆಕುಂಡ್ ಕಳಕೊಳ್ಳದೆ ಚೆನ್ನಾಗಿ ಆಭ್ಯಸಿಸಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಎಂದರು.

ಶಿಬಿರವು ಮಕ್ಕಳಲ್ಲಿ ಜ್ಞಾನ ನಿಧಿಯಾಗಿ ಹೊರಹೊಮ್ಮಲಿ-ಗೋವಿಂದ ನಾಯಕ್:
ಭಾಗವತರು, ಹಿರಿಯರಾದ ಗೋವಿಂದ ನಾಯಕ್ ಪಾಲೆಚ್ಚಾರ್ ಮಾತನಾಡಿ, ಸಣ್ಣ ಹರೆಯದಲ್ಲಿ ಮಕ್ಕಳಿಗೆ ಸಿಗುವ ಕೌಶಲ್ಯಯುತ ಶಿಕ್ಷಣ ಹಿಂದೆ ನಮಗೆ ಸಿಗಲಿಲ್ಲ. ಸರಿಯಾಗಿ ರೇಡಿಯೋ ನೋಡಿದ್ದೇ ಇಪ್ಪತ್ತು ವರ್ಷದ ನಂತರ. ಇಂದಿನ ಪೋಷಕರು ತಮ್ಮ ಕೆಲಸ ಸಾಗಲು ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು, ಟಿ.ವಿ ಆನ್ ಮಾಡಿಟ್ಟುರುವುದು ಮಕ್ಕಳಲ್ಲಿ ಏಕಾಗ್ರತೆ ಇಲ್ಲದಂತೆ ಮಾಡಿದೆ. ಮಕ್ಕಳು ಸದಾ ಚಟುವಟಿಕೆಯಲ್ಲಿರಲು ಇಂತಹ ಶಿಬಿರಗಳು ಸಹಕಾರಿಯಾಗಿದ್ದು ಮಕ್ಕಳಲ್ಲಿ ಜ್ಞಾನ ನಿಧಿಯಾಗಿ ಹೊರಹೊಮ್ಮಲಿ ಎಂದರು.ಕಾರ್ಯಕ್ರಮದಲ್ಲಿ ದುರ್ಗಾಪ್ರಸಾದ್, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶೃತಿ ದುರ್ಗಾಪ್ರಸಾದ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಮಕ್ಕಳ ಕೌಶಲ್ಯ ಹೆಚ್ಚಿಸುವಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ..
ಕೆಲವು ಶಾಲೆಗಳಲ್ಲಿ ಕೇವಲ ಓದಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ ಆದರೆ ಮಕ್ಕಳಲ್ಲಿ ಕೌಶಲ್ಯ ಹೆಚ್ಚಿಸುವ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಇಲ್ಲಿನ ಬೇಸಿಗೆ ಶಿಬಿರದಲ್ಲಿ ಮಕ್ಕಳ ಕೌಶಲ್ಯ ಹೆಚ್ಚಿಸುವಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತಿದ್ದು ಈ ಮೂಲಕ ಮಕ್ಕಳು ಮೊಬೈಲ್ ಗೆ ದಾಸನಾಗುವುದು ಕಡಿಮೆಯಾಗುತ್ತದೆ.
-ಮೇಘ, ಸಂಪನ್ಮೂಲ ವ್ಯಕ್ತಿ

ಏ.21ರಿಂದ 30ರವರೆಗೆ..
ಶಿಬಿರವು ಏ.21ರಿಂದ 30ರವರೆಗೆ ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30ರ ವರೆಗೆ ಜರಗಲಿದ್ದು ವಯೋಮಿತಿ 4 ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ನಡೆಯಲಿದೆ. ಜೂನ್ ನಲ್ಲಿ ಟ್ಯೂಶನ್ ತರಗತಿಗಳನ್ನು ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9986551415 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಏನೇನಿದೆ..
ಟ್ಯೂಶನ್ ಕ್ಲಾಸಿನಲ್ಲಿ ಬ್ರೈನ್ ಜಿಮ್, ರಿದಮ್ ಅಂಡ್ ಬೀಟ್, ಡೈಲಿ ಬೂಸ್ಟ್, ಉತ್ತಮ ಅಭ್ಯಾಸ, ಡ್ರಾಮೇನಿಯಾ, ಡೂಡಲ್‌ ಅಂಡ್ ಡ್ರೆಸ್, ಮನೋರಂಜಕ ಆಟಗಳು, ನೈತಿಕ ಮೌಲ್ಯಗಳು ಹಾಗೂ ಇನ್ನಿತರ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. 

LEAVE A REPLY

Please enter your comment!
Please enter your name here