ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನೇಮೋತ್ಸವದ ಸಭೆ

0


ಈ ಭಾರಿ ವ್ಯವಸ್ಥಿತವಾಗಿ, ವಿಜೃಂಭನೆಯಿಂದ ನೇಮೋತ್ಸವ-ಅಶೋಕ್ ರೈ

ಪುತ್ತೂರು:ಬಲ್ನಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಈ ವರ್ಷದ ನೇಮೋತ್ಸವವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ವಿಜೃಂಭನೆಯಿಂದ ನಡೆಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಎ.28ರಂದು ನಡೆಯಲಿರುವ ವರ್ಷಾವಧಿ ನೇಮ ನಡಾವಳಿಯ ಅಂಗವಾಗಿ ಎ.25ರಂದು ಬಲ್ನಾಡು ದೈವಸ್ಥಾನದಲ್ಲಿ ಭಕ್ತಾದಿಗಳ ಸಭೆ ನಡೆಸಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ದಂಡನಾಯಕ ಉಳ್ಳಾಲ್ತಿ ನೇಮೋತ್ಸವದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಪ್ರಸಾದ ವಿತರಣೆ, ಅನ್ನಸಂತರ್ಪಣೆ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು. ಬಡವರಿಗೂ ಯಾವುದೇ ತೊಂದರೆ ಇಲ್ಲದೆ ಪ್ರಸಾದ ಸ್ವೀಕರಿಸುವ ವ್ಯವಸ್ಥೆಯಾಗಬೇಕು. ಬಿಸಿಲಿನ ಪ್ರಭಾವ ಬಹಳಷ್ಟಿದ್ದು ಶಾಮಿಯಾನ, ಫ್ಯಾನ್, ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ಅನ್ನಸಂತರ್ಪಣೆ ವಿತರಣೆಯನ್ನು ವ್ಯವಸ್ಥಿತವಾಗಿ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ಮಾಡಲಾಗುವುದು. ಪ್ರಸಾದ ವಿತರನೆಯಲ್ಲಿ ಬದಲಾವಣೆ ಮಾಡಲಾಗುವುದು. ಹೆಚ್ಚುವರಿ ಜನರನ್ನು ನಿಯೋಜಿಸಲಾಗುವುದು. ನೇಮೋತ್ಸವದಲ್ಲಿ ಭಕ್ತಾದಿಗಳನ್ನು ಸ್ವೀಕರಿಸಿ ಅವರಿಗೆ ಪ್ರಸಾದ ಹಾಗೂ ಅನ್ನಪ್ರಸಾದ ನೀಡಿ ಕಳುಹಿಸಿಕೊಡುವ ಜವಾಬ್ದಾರಿ ಬಲ್ನಾಡು ಗ್ರಾಮದವರಿಗಿದೆ ಎಂದು ಹೇಳಿದರು.


ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಆಡಳಿತಾಧಿಕಾರಿ ದೇವಪ್ಪ ಪಿ.ಆರ್., ಕಚೇರಿ ವ್ಯವಸ್ಥಾಪಕ ಚಂದ್ರಶೇಖರ ಭಟ್ ಹಾಗೂ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ಸವ ಸಮಿತಿ ಕಾರ್ಯದರ್ಶಿ ನವೀನ್ ಕರ್ಕೇರಾ ರಾಂಬೈಲ್ ಸ್ವಾಗತಿಸಿ, ಸದಸ್ಯ ಕಿರಣ್ ಬಸಂತಕೋಡಿ ವಂದಿಸಿದರು. ಉತ್ಸವ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನೇಮೋತ್ಸವ ಆದ ಬಳಿಕ ಪ್ರಶ್ನಾ ಚಿಂತನೆ ನಡೆಸಿ ಬಲ್ನಾಡು ಭಟ್ಟಿ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ನಡೆಸಿ ಬ್ರಹ್ಮಕಲಶ ನಡೆಸಲಾಗುವುದು. ಜೊತೆಯಲ್ಲಿ ದೈವಸ್ಥಾನದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಚಿಂತನೆ ನಡೆಸಲಾಗುವುದು. ಭಂಡಾರ ಬರುವ ರಸ್ತೆ ಕಾಂಕ್ರಿಟೀಕರಣ, ತಡೆಗೋಡೆ ನಿರ್ಮಾಣ ಮಾಡಲಾಗುವುದು. ಜೀರ್ಣೋದ್ಧಾರದ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಲಾಗುವುದು. ಊರವರೊಂದಿಗೆ ಚರ್ಚಿಸಿಲಾಗಿದ್ದು ಅವರು ಜವಾಬ್ದಾರಿ ತಗೊಂಡಿದ್ದಾರೆ.
ಅಶೋಕ್ ಕುಮಾರ್ ರೈ,
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here