






ಪುತ್ತೂರು: ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಶ್ರೀ ಸಾಯಿ ಜನರಲ್ ಸ್ಟೋರ್ಸ್ ಮೇ.4ರಂದು ಶುಭಾರಂಭಗೊಂಡಿತು.



ಪುರೋಹಿತರಾದ ನಾಗೇಶ್ ಕುದ್ರೆತ್ತಾಯರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಎನ್.ಎಸ್.ಡಿ ಹಾಗೂ ಎಸ್.ಡಿ ವಸಂತ, ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಜನಾರ್ದನ ಗೌಡ, ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬೆಳಿಯಪ್ಪ ಗೌಡ, ಕಾರ್ಯದರ್ಶಿ ಪ್ರಫುಲ್ಲನಾಥ ರೈ, ಜಿ.ಪಂ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಅಬ್ದುಲ್ ರಹಿಮಾನ್ ಬಡಕ್ಕೋಡಿ, ನಿವೃತ್ತ ಶಿಕ್ಷಕ ಮಹಾಬಲ ರೈ ಬೊಟ್ಯಾಡಿ, ಮುಂಡೂರು ಪ್ರಾ.ಕೃ.ಪ.ಸಹಕಾರ ಸಂಘದ ನಿರ್ದೇಶಕರಾದ ಸುಧೀರ್ಕೃಷ್ಣ ಪಡ್ಡಿಲ್ಲಾಯ, ವಸಂತ ಬಿ.ಎನ್ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು.




ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಶ್ರೀ ಸಾಯಿ ಜನರಲ್ ಸ್ಟೋರ್ಸ್ನ ಮಾಲಕರಾದ ದಯಾನಂದ ತೌಡಿಂಜ ಹಾಗೂ ವನಿತಾ ಡಿ ಮಾತನಾಡಿ ನಮ್ಮಲ್ಲಿ ಜಿನಸು ಸಾಮಾಗ್ರಿಗಳು, ಬೇಕರಿ ಐಟಂಗಳು, ಪುಸ್ತಕ, ಲೇಖನಿ ಸಾಮಾಗ್ರಿಗಳು, ತರಕಾರಿಗಳು ಲಭ್ಯವಿದ್ದು ಗ್ರಾಹಕರು ಸಹಕಾರ ನೀಡಬೇಕೆಂದು ತಿಳಿಸಿದರು. ಧನ್ವಿನ್ ಸಹಕರಿಸಿದರು.










