






ಪುತ್ತೂರು: ಸೌಹಾರ್ದ ಯೂತ್ ಫ್ರೆಂಡ್ಸ್ ಆತೂರು ವತಿಯಿಂದ ಝೈನ್ ಆತೂರು ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಹತ್ತು ಬಡ ಕುಟುಂಬಕ್ಕೆ ಕಿಟ್ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಹತ್ತು ತಂಡಗಳ ಅಂಡರ್ ಆರ್ಮ್ ಲೀಗ್ ಮಾದರಿಯ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟ ಮೇ.2 ಮತ್ತು 3ರಂದು ಆತೂರು ಶಾಲಾ ಮೈದಾನದಲ್ಲಿ ನಡೆಯಿತು.



ಎರಡು ದಿನಗಳ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ ಸೌಹಾರ್ದ ಯೂತ್ ಫ್ರೆಂಡ್ಸ್ ಆತೂರು ಹಾಗೂ ಝೈನ್ ಆತೂರುರವರು ಆ ಭಾಗದಲ್ಲಿ ನಡೆಸಿಕೊಂಡು ಬರುತ್ತಿರುವ ಕಾರುಣ್ಯ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.




ಝೈನ್ ಆತೂರು ಅವರು ಸಮಾಜದ ಎಲ್ಲರೊಂದಿಗೆ ಬೆರೆಯುತ್ತಾ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದು ಇವರ ಜನಪರವಾದ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿದೆ, ಇಂತಹ ಯುವಕರನ್ನು ನಾವು ಪ್ರೋತ್ಸಾಹಿಸಿ ಬೆಂಬಲಿಸಬೇಕು ಎಂದು ಗಣ್ಯರು ಹೇಳಿದರು. ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಿಯಾ ಉಬಾರ್ ತಂಡ ಚಾಂಪಿಯನ್ ಪಟ್ಟ ಪಡೆದರೆ, ಸ್ರೀದಾ ವಾರಿಯರ್ ಸರಳಿಕಟ್ಟೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತರಿಗೆ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.










