ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ಗುಮಾಸ್ತ ಶಂಕರನಾರಾಯಣ ಭಟ್‌ ನಿಧನ

0

ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆಯ ನಿವೃತ್ತ ಗುಮಾಸ್ತ ಕಿನ್ನಿಂಗಾರು ಕೂಳೂರು ಶಂಕರನಾರಾಯಣ ಭಟ್‌ (80ವ.) ರವರು ಮೇ.7 ರಂದು ನಿಧನರಾದರು.

ಕುಕ್ಕುಪುಣಿ ಗೋವಿಂದ ಭಟ್‌ ಮತ್ತು ಜೋಗಿಮೂಲೆ ಗೌರಿ ದಂಪತಿ ಪುತ್ರನಾಗಿರುವ ಇವರು ಪಂಜ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿ ಬಳಿಕ ದೂರ ಶಿಕ್ಷಣ ಮೂಲಕ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿದ್ದರು. ನವೋದಯ ಪ್ರೌಢಶಾಲೆಯ ಆರಂಭದಿಂದ 2006 ರವರೆಗೆ 46 ವರ್ಷಗಳ ಕಾಲ ಗುಮಾಸ್ತರರಾಗಿ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ದಾಖಲೆ ವಿಭಾಗದಲ್ಲಿ ಪ್ರಾಮಾಣಿಕ ಮತ್ತು ದಕ್ಷ ಕಾರ್ಯನಿರ್ವಹಣೆ ಮಾಡಿರುತ್ತಾರೆ. ತನ್ನ ನಿವೃತ್ತಿಯ ಬಳಿಕ ಕುಟುಂಬದೊಂದಿಗೆ ಕಿನ್ನಿಂಗಾರು ಕೂಳೂರಿನಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರು ಪತ್ನಿ ಈಶ್ವರೀ ದೇವಿ, ಪುತ್ರ ಸುಧೀರ್‌ ಕೃಷ್ಣ, ಪುತ್ರಿಯರಾದ ಸುಪ್ರೀಯಾ ಮತ್ತು ಸುಪ್ರೀತಾ ರವರನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here