ಜೆ.ಇ.ಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ವಿದ್ಯಾರ್ಥಿಗಳ ಮಹತ್ತರ ಸಾಧನೆ

0

ಪುತ್ತೂರು :ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸಿದ 2026ನೇ ಸಾಲಿನ ಜೆ.ಇ.ಇ ಮೈನ್ಸ್ ಪ್ರವೇಶಾತಿ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಗಳಿಸುವುದರ ಮೂಲಕ ಉನ್ನತ ಸಾಧನೆಯನ್ನು ಮೆರೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ ಕೆ ಆರ್ (ಮಡಿಕೇರಿಯ ರಮೇಶ್ ಕೆ ಕೆ ಹಾಗೂ ರೇಣುಕಾ ಬಿ ವಿ ದಂಪತಿಗಳ ಪುತ್ರಿ)B.Planning 2098ನೇ ರ‍್ಯಾಂಕ್,B.Arch 3335 ನೇ ರ‍್ಯಾಂಕ್, ದೀಕ್ಷಾ ಜೆ (ಕಾಸರಗೋಡಿನ ಕುಂಬಳೆಯ ಎಸ್ ನಾರಾಯಣ ಹಾಗೂ ಪುಷ್ಪ ಕೆ ದಂಪತಿಗಳ ಪುತ್ರಿ) B. Planning 1650ನೇ ರ‍್ಯಾಂಕ್, B.Arch 2734ನೇ ರ‍್ಯಾಂಕ್ ಹಾಗೂ ಅದಿತಿ ಯು (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ ಡಿ ದಂಪತಿಗಳ ಪುತ್ರಿ)B. Planning 2597ನೇ ರ‍್ಯಾಂಕ್, B.Arch 15857ನೇ ರ‍್ಯಾಂಕ್ ಗಳಿಸಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ – ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here