






ಬಡಗನ್ನೂರು: ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ದೃಢಸಂಕಲ್ಪದ ಚಿಂತನೆ ಮಾಡಿದಾಗ ಶೇಕಡಾ 100 ಫಲಿತಾಂಶ ಬರಲು ಸಾಧ್ಯ ಎಂದು ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.



ಅವರು 2025 -26ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾಸಂಸ್ಥೆಗೆ ನೂರು ಶೇಕಡಾ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾನು ಪಾಸು ಆಗುವುದರಿಂದ ನೂರು ಶೇಕಡಾ ಫಲಿತಾಂಶ ಬರಲು ಸಾಧ್ಯವಿಲ್ಲ. ನಾವು ಪಾಸು ಆಗೋದರ ಮೂಲಕ ನೂರು ಶೇಕಡಾ ಫಲಿತಾಂಶ ಬರಲು ಸಾಧ್ಯ. ಒಗ್ಗಟ್ಟಿನಿಂದ ದೃಢಸಂಕಲ್ಪದ ಚಿಂತನೆ ಮಾಡಿದಾಗ ಶೇಕಡಾ 100 ಫಲಿತಾಂಶ ಬರಲು ಸಾಧ್ಯ. ಉತ್ತಮ ದಾರಿಯನ್ನು ಆಯ್ಕೆ ಮಾಡುವ ಮೂಲಕ ಉಜ್ಜಲ ಭವಿಷ್ಯ ನಿಮ್ಮದಾಗಲಿ ಎಂದು ಹೇಳಿ ಶುಭಹಾರೖೆಸಿದರು.ಸಂಸ್ಥೆಯ ನಿರ್ದೇಶಕ ಗಣರಾಜ ಕುಂಬ್ಳೆ ರವರು ಮಾತನಾಡಿ “ಒಳ್ಳೆಯ ಸಾಧನೆ ಮತ್ತು ಒಳ್ಳೆಯ ಚಿಂತನೆಯನ್ನು ಮಾಡಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬಾಳುವಂತೆ ಕರೆ ನೀಡಿದರು.




ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢಶಾಲಾ ಎಸ್.ಡಿಯಂಸಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರತಿಭಾ ಪ್ರೌಢಶಾಲೆಯ ಮುಖ್ಯಗುರು ಸುಮನ. ಬಿ., ಪ್ರಾಥಮಿಕ ಶಾಲೆಯ ಮುಖ್ಯಗುರು ರಾಜಗೋಪಾಲ್.ಎನ್. ಉಪಸ್ಥಿತರಿದ್ದರು. 10ನೇ ತರಗತಿಯ ಧನ್ಯತ್ ಗೌಡ ಕೆ. ಪಿ ಮತ್ತು ಸಿಂಚನ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಮತ್ತು ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗೌರವಾರ್ಪಣೆ
10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಶಾಲು ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಪ್ರತಿಭಾ ಪ್ರೌಢಶಾಲಾ ಮುಖ್ಯ ಗುರು ಸುಮನ.ಬಿ, ಸ್ವಾಗತಿಸಿ,ಸಹ ಶಿಕ್ಷಕಿ ಭವಿತಾ ವಂದಿಸಿದರು. ಸಹ ಶಿಕ್ಷಕಿ ಪ್ರೀತಿ ಕುಮಾರಿ ಎಂ.ಪಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.










