






ಪುತ್ತೂರು: ವಿನೂತನ ತಂತ್ರಜ್ಞಾನ ಮತ್ತು ಶೈಲಿಯ ಮೂಲಕ ಕಾರು ಪ್ರಿಯರ ಮನಗೆದ್ದಿರುವ ಹೆಸರಾಂತ ಕಿಯಾ ಇದರ ಮಾರಾಟ ಸೇವಾ ಮಳಿಗೆ ಇಲ್ಲಿನ ಮುಕ್ರಂಪಾಡಿಯಲ್ಲಿ ಕಾರ್ಯಚರಿಸುತ್ತಿರುವ ಎ.ಆರ್.ಎಂ ಕಿಯಾದಲ್ಲಿ ವಿನೂತನ ಸಿರೋಸ್ 2.0 ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.


ಬಳಿಕ ಕಾರಿನ ಪ್ರಥಮ ಗ್ರಾಹಕರಾದ ಬೊಳುವಾರು ಸೂರ್ಯಪ್ರಭ ಸಂಕೀರ್ಣ ಇದರ ಮಾಲೀಕರಾದ ವರುಣ್ ವಿ ನಾಯಕ್ ಹಾಗೂ ವರ್ಷ ವಿ ನಾಯಕ್ ಇವರಿಗೆ ಕಾರಿನ ಕೀಲಿಯನ್ನು ಸಂಸ್ಥೆಯ ಸೀನಿಯರ್ ಸೇಲ್ಸ್ ಹೆಡ್ ಸರೋಶ್ ಇವರು ಹಸ್ತಾಂತರಿಸಿ ಹಾರೈಸಿದರು.



ಸೇಲ್ಸ್ ಎಕ್ಸಿಕ್ಯೂಟಿವ್ ವಿಶಾಲ್ ಕಾರಿನ ವಿಶೇಷತೆಯನ್ನು ವಿವರಿಸಿದರು. ಚೇತನ್ ನಿರೂಪಿಸಿದರು. ವೇಳೆ ಗ್ರಾಹಕ ಮಹಮ್ಮದ್ ಹನೀಫ್ ಸಹಿತ ಹಲವರು ಗ್ರಾಹಕರು ಮತ್ತು ಸಿಬಂದಿಗಳೆಲ್ಲರೂ ಇದ್ದರು.










