






ಕುಂತೂರು: ಮರ್ಹಬಾ ಫೌಂಡೇಶನ್, ಮಂಗಳೂರು ವತಿಯಿಂದ ಮೇ.9 ರಂದು ಕುಂತೂರಿನ ಎ&ಬಿ ಜುಮಾ ಮಸೀದಿಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.


ಪ್ರತಿಭಾವಂತರಿಗೆ ಸನ್ಮಾನ
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಕುಂತೂರು ಜಮಾಅತ್ ವ್ಯಾಪ್ತಿಯ 17 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



ಎ&ಬಿ ಜುಮಾ ಮಸೀದಿಯ ಮುದರ್ರಿಸ್ ಮೊಯಿದು ಫೈಝಿ ಎಡಪ್ಪಲ್ ಅವರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಸೀದಿ ಅಧ್ಯಕ್ಷ ಜನಾಬ್ ಅನೀಸ್ ನೂಜಿಲ ಸ್ವಾಗತಿಸಿ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಮರ್ಹಬಾ ಫೌಂಡೇಶನ್‌ಗೆ ಕೃತಜ್ಞತೆ ಸಲ್ಲಿಸಿದರು.
ಮಾರ್ಗದರ್ಶನ
ಜನಾಬ್ ರಝಾಕ್ ಮಾಸ್ಟರ್, ಅನಂತಾಡಿ ಅವರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು. ಮರ್ಹಬಾ ಫೌಂಡೇಶನ್ ಸಂಸ್ಥಾಪಕ ಜನಾಬ್ ಸುಜಾಹ್ ಮೊಹಮ್ಮದ್ ಪ್ರತಿಭಾವಂತರನ್ನು ಅಭಿನಂದಿಸಿ, ಉನ್ನತ ಶಿಕ್ಷಣಕ್ಕೆ ಅಗತ್ಯ ಸಹಕಾರದ ಭರವಸೆ ನೀಡಿದರು.
ರುಕಿಯಾ ಶಹೀಮಾ ನೀಟ್ ಪರೀಕ್ಷಾ ತಯಾರಿ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಜನಾಬ್ ಸಿದ್ದೀಕ್ ಅಲ್ ಅಮೀನ್ ಮರುವಂತಿಲ, ಸಮಿತಿ ಸದಸ್ಯರಾದ ಜನಾಬ್ ಪುತುಮೋನು ಮುಡಿಪಿನಡ್ಕ, ಜನಾಬ್ ಹಮೀದ್ ಅಜ್ಮಿರ್, ಜನಾಬ್ ಅಶ್ರಫ್, ಜಮಾಅತ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕಜೆ ಹಾಗೂ ಇತರರು ಉಪಸ್ಥಿತರಿದ್ದರು










