






ಪುತ್ತೂರು: ಬೆಥನಿ ಐಟಿಐ ಸಂಸ್ಥೆಯಲ್ಲಿ ಕ್ಯಾಂಪಸ್ ಉದ್ಯೋಗ ಆಯ್ಕೆ ಪ್ರಕ್ರಿಯೆ-2026 ನಡೆಯಿತು. ಜಪಾನ್ ಮೂಲದ ಮಕಿನೋ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯು ಫಿಟ್ಟರ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ವಿಭಾಗದಲ್ಲಿ ತಾಂತ್ರಿಕ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿತು.


ಮಕಿನೋ ಸಂಸ್ಥೆಯ ಎಚ್ಆರ್ ವಿಭಾಗದ ವಿನಯ್ ಮತ್ತು ತಂಡದವರು ಕಂಪನಿಯ ವಿಶೇಷತೆ, ಕಾರ್ಯವೈಖರಿ ಮತ್ತು ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಸಂದರ್ಶನ ಪ್ರಕ್ರಿಯೆ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಿನ್ಸೆಂಟ್ ಸಿ.ಎಸ್ ಮತ್ತು ಶಿವಾನಂದ ಎಸ್ ಕ್ಯಾಂಪಸ್ ಡ್ರೈವ್ನ್ನು ಆಯೋಜಿಸಿದ್ದರು.













