








ಕಾಣಿಯೂರು : ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ತಿಂಗಳ ಸಂಕ್ರಮಣ ಪೂಜೆಯ ಪ್ರಯುಕ್ತ ಕಲ್ಪಡ ಕೂಡುಕಟ್ಟಿಗೆ ಒಳಪಟ್ಟ ಮತ್ತು ಕಲ್ಪಡ ಊರಿನಿಂದ ವಿವಾಹ ಮಾಡಿ ಕೊಟ್ಟು ಬೇರೆ ಊರಿನಲ್ಲಿ ನೆಲೆಸಿರುವವರ ಮಕ್ಕಳು ಸೇರಿದಂತೆ ಶೈಕ್ಷಣಿಕವಾಗಿ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಆಧ್ಯಾ ವೈ ರೈ ಕುಕ್ಕುಮಜಲು, ಕೀರ್ತಿ ಕೆ. ಪೋಳಾಜೆ, ಕೀರ್ತಿ ಕೆ.ಎಸ್. ಕುಂಡುಳಿ, ರಕ್ಷಿತಾ ಎಸ್. ಪಿ. ಪೊಟ್ರೆ, ಸುಹೇಲ್ ಮೂವಪ್ಪೆ, ತೀರ್ಥ ಲಕ್ಷ್ಮಿ ಸಿ.ಎಂ. ಮಿತ್ತಟ್ಟ, ದೀಕ್ಷಾ ಡಿ. ಮುಲ್ಕಿ, ಹವ್ಯಶ್ರೀ ಕಲ್ಪಡ, ಪ್ರೇಕ್ಷಿತ್ ಕೈಪಳಾಜೆ, ಭವ್ಯಶ್ರೀ ಕೆ ಕಲ್ಪಡ, ಧನುಷ್ ಕಲ್ಪಡ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಲಹರಿ ಬಿ. ಟಿ. ಬಲ್ನಾಡು, ತ್ರಿಶಾ ಎಚ್ ವಿ ಹುದೇರಿ, ಬೃಂದಾ ಕೆ. ಸಿ. ಕೆಲಂಬಿರಿ, ರಿತನ್ ಪಿ ಪೊಟ್ರೆ ಹಾಗೂ ವಿಶೇಷವಾಗಿ ಪ್ರಾಥಮಿಕ ಶಾಲಾ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದು, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕು. ಕೀರ್ತಿ ಕುಕ್ಕಿಲ ಇವರೆಲ್ಲರನ್ನು ಕಲ್ಪಡ ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ ಕಲ್ಪಡ, ಆಡಳಿತ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ. ಎಂ., ಕಾರ್ಯದರ್ಶಿ ಬಾಲಕೃಷ್ಣ ಪೋಳಾಜೆ, ಕೊಡಿಯಾಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹರ್ಷನ್ ಕೆ.ಟಿ., ಯತೀಶ್ ರೈ ಕುಕ್ಕುಮಜಲು, ಯುವರಾಜ ಇಪ್ಪುಳ್ತಡಿ, ನಮ್ಮೂರ ನಮ್ಮ ಕನಸು ಜನ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಅಶ್ವಿನ್ ನಟ್ಟಿಹಿತ್ಲು, ಸುಂದರ ಗೌಡ ಪೋಳಾಜೆ, ಭಾಸ್ಕರ ಗೌಡ ಗುತ್ತು, ವಿಜೇತ್ ಕುಂಡಾಳ, ಮಾಯಿಲಪ್ಪ ಗೌಡ, ಪುಟ್ಟಣ್ಣ ಗೌಡ ಪೊಟ್ರೆ, ಚೆನ್ನಪ್ಪ ಗೌಡ ಕಲ್ಪಡ, ಮುಕುಂದ ಕೇಶವ, ಕುಶಾಲಪ್ಪ ಗೌಡ ಕಲ್ಪಡ, ಕುಶಾಲಪ್ಪ ಗೌಡ ಪೋಳಾಜೆ ಉಪಸ್ಥಿತರಿದ್ದರು. ಗಣೇಶ್ ಪೆರ್ಲೋಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ 103 ಮಂದಿ ಭಕ್ತರಿಂದ ಸಂಕ್ರಮಣ ಪೂಜೆ ನಡೆಯಿತು.












