







ಪುತ್ತೂರು: ಕಲಿಯುಗ ಕಲೆ, ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.15ರಂದು ರಾತ್ರಿ ಸಂಕ್ರಮಣದಂಗವಾಗಿ ಅಗ್ನಿ ಕಲ್ಲುರ್ಟಿ, ಪಾಷಾಣಮೂರ್ತಿ ಮತ್ತು ಸ್ವಾಮಿ ಕೊರಗಜ್ಜ ದೈವಗಳಿಗೆ ಕೋಲ, ಅಗೇಲು ಸೇವೆ ನಡೆಯಿತು.



ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಮೇ 17ರಂದು ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.














