ನಿಡ್ಪಳ್ಳಿ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಂಪನ್ನ

0

ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಕೊನೆಯ ದಿನವಾದ ಮೇ.22ರಂದು ಮಕ್ಕಳಿಗೆ ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮಿ ಛಲವಾದಿ ವಿವಿಧ  ಚಟುವಟಿಕೆಗಳನ್ನು ನಡೆಸಿ ಮಾಹಿತಿ ನೀಡಿ ಮಕ್ಕಳಿಗೆ ಪೆನ್ ಕೊಡುಗೆ ನೀಡಿದರು.

ನಂತರ ನಡೆದ  ಸಮಾರೋಪ ಸಮಾರಂಭದ ವೇದಿಕೆಯಲ್ಲಿ  ಪಂಚಾಯತ್ ಆಡಳಿತ ಅಧಿಕಾರಿ ಚೇತನ್, ಪಿಡಿಒ ಜಯಪ್ರಕಾಶ್, ಕಾರ್ಯದರ್ಶಿ ಶಿವರಾಮ ಮೂಲ್ಯ  ಉಪಸ್ಥಿತರಿದ್ದರು.ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಗ್ರಂಥ ಪಾಲಕಿ ಪವಿತ್ರ. ಜಿ ಕಾರ್ಯಕ್ರಮ ನಿರೂಪಿಸಿದರು.

ಪಂಚಾಯತ್ ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯಕುಮಾರಿ, ಚಿತ್ರಾ, ಶಾಲಿನಿ, ತೇಜಸ್ವಿನಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಾಮ ಸಹಕರಿಸಿದರು.ಇದರೊಂದಿಗೆ ಒಂದು ವಾರಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಂಪನ್ನಗೊಂಡಿತ್ತು.

ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಮಾಜಿ ಸದಸ್ಯರಾದ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಅವಿನಾಶ್ ರೈ ಕುಡ್ಚಿಲ, ಬಾಲಚಂದ್ರ ಕುಜುಂಬೋಡಿ, ಬಾಲಚಂದ್ರ ರೈ ಆನಾಜೆ, ನಂದಿನಿ ರೈ, ಕಳಂಜ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬೋರ್ಕರ್, ಕಾರ್ಯದರ್ಶಿ ಶಿವರಾಮ ಮೂಲ್ಯ. ಎಂ, ಸಿಬ್ಬಂದಿಗಳಾದ ಜಯಕುಮಾರಿ, ರೇವತಿ.ಪಿ, ಪಶುಸಖಿ ತೇಜಸ್ವಿನಿ, ಗ್ರಾಮ ಸಂಪನ್ಮೂಲ ವ್ಯಕ್ತಿ ಚಿತ್ರಾ,ಮುಖ್ಯ ಪುಸ್ತಕ ಬರಹಗಾರ್ತಿ ಭವ್ಯ, ಗ್ರಾಮಸ್ಥರಾದ ಸತೀಶ್ ರೈ ಹೊಸ ಮನೆ,  ಆರ್ ಸಿ ನಾರಾಯಣ ರೆಂಜ, ಸಂತೋಷ್ ಕುಮಾರ್ ಬೇರಿಕೆ, ಸಿ ಹೆಚ್ ಒ ಛಲವಾದಿ ಲಕ್ಷ್ಮೀ ಇವರು ಒಂದು ವಾರ ನಡೆದ ಶಿಬಿರದ ಪ್ರಾಯೋಜಕತ್ವ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳು;
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಕುಸುಮಾವತಿ. ಎ.ವಿ, ಶಿಕ್ಷಕಿ ಭಾರತಿ ರೈ ಮುಂಡೂರು,ಶಿಕ್ಷಕ ಜನಾರ್ಧನ ದುರ್ಗಾ, ಶಿಕ್ಷಕಿ ಶೋಭಾ, ಶಿಕ್ಷಕಿ ಮಮತಾ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಛಲವಾದಿ ಲಕ್ಷ್ಮೀ ಇವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here