ತಾ|ಶಾಲಾ ಶಿಕ್ಷಣ  ಇಲಾಖೆ ನೌಕರರ ಸಂಘ, ವಿವಿಧ ಶೈಕ್ಷಣಿಕ ಸಂಘ ಸಂಸ್ಥೆಗಳ ಸಹಕಾರದಿಂದ ನಿವೃತ್ತರಿಗೆ ಬೀಳ್ಕೊಡುಗೆ, ಅಧಿಕಾರ ವಹಿಸಿಕೊಂಡವರಿಗೆ ಅಭಿನಂದನೆ, ಪದೋನ್ನತಿ ಹೊಂದಿದವರಿಗೆ ಸನ್ಮಾನ

0

ಪುತ್ತೂರು:ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ  ಇಲಾಖೆ ನೌಕರರ ಸಂಘ ಪುತ್ತೂರು ತಾಲೂಕು ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ವಿವಿಧ ಶೈಕ್ಷಣಿಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪುತ್ತೂರು ತಾಲೂಕು ಪಂಚಾಯತ್ ನೂತನ ಹವಾ ನಿಯಂತ್ರಿತ ಸಭಾಂಗಣದಲ್ಲಿ ಮೇ  30 ರಂದು ನಿವೃತ್ತರಿಗೆ ಬೀಳ್ಕೊಡುಗೆ, ಅಧಿಕಾರ ವಹಿಸಿಕೊಂಡವರಿಗೆ ಅಭಿನಂದನೆ,  ಪದೋನ್ನತಿ ಹೊಂದಿದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷರು, ಜಿಲ್ಲಾ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾಗಿರುವ  ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಷ್ಣು ಪ್ರಸಾದ್ ಸಿ ಇವರು ಸೇವಾ ನಿವೃತ್ತಿಗೊಂಡ ಪ್ರಯುಕ್ತ ಸನ್ಮಾನಿಸಿ ಅಭಿನಂದಿಸಲಾಯಿತು.  ಇದೇ ಸಂದರ್ಭದಲ್ಲಿ ತೆರವಾದ ಅವರ ಸ್ಥಾನಕ್ಕೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಮ್ಮ ಸಂಘದ ಉಪಾಧ್ಯಕ್ಷರು, ಪಾಪೆಮಜಲು ಪ್ರೌಢಶಾಲೆಯ ಮುಖ್ಯ ಗುರುಗಳು ಆಗಿರುವ ಮೋನಪ್ಪ ಇವರನ್ನು ಸ್ವಾಗತಿಸಲಾಯಿತು. ಅದೇ ರೀತಿ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಕ್ರಪಾಣಿರವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಸೇವೆಯಲ್ಲಿ ಪದೋನ್ನತಿ ಹೊಂದಿ ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾದ ಶ್ರೀಮತಿ ಸಿಲ್ವಿಯಾ ಕ್ಯಾಸ್ತಲಿನೋರವರನ್ನು ಸ್ವಾಗತಿಸಲಾಯಿತು. ಅದೇ ರೀತಿ ಪುತ್ತೂರು ತಾಲೂಕು ಅಕ್ಷರ ದಾಸೋಹದ ಸಹ ನಿರ್ದೇಶಕರಾಗಿ ಪ್ರಭಾರ ವಹಿಸಿಕೊಂಡಿರುವ ಶಿವರಾಮ ಕಾರಂತ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಲಜಾಕ್ಷಿ  ಇವರನ್ನು ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಮತ್ತು ಇನ್ನಿತರ ಕಾರಣಗಳಿಂದ ವರ್ಗಾವಣೆಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಭಾಗವಹಿಸಿ ಅತಿಥಿಗಳನ್ನು ಗೌರವಿಸಿದ ವಿವಿಧ ಸಂಘಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ  ಸಂಘ ಪುತ್ತೂರು ತಾಲೂಕ್ ಸಮಿತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ, ಪೋಷಣ ಅಭಿಯಾನ ಸಿಬ್ಬಂದಿಗಳು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ತಾಲೂಕು, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಪುತ್ತೂರು, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರ ಸಂಘ ಕಡಬ ಪುತ್ತೂರು ತಾಲೂಕು ಸಮಿತಿ ವತಿಯಿಂದ ಅತಿಥಿ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಎಸ್ ಸರ್ಪಂಗಳ ಸ್ವಾಗತಿಸಿದರು. ಪ್ರಾಥಮಿಕ ಶಾಲಾ  ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಕಾರ್ಯದರ್ಶಿ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ  ಮಾಮಚ್ಚನ್ ಎಂ ಪ್ರಾಸ್ತಾವಿಕ ಮಾತುಗಳ ಮೂಲಕ ಅಭಿನಂದನಾ ಮಾತುಗಳನ್ನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ ಪ್ರಾರ್ಥಿಸಿದರು. 

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶಾಲಾ ಶಿಕ್ಷಣ ಇಲಾಖೆ ನೌಕರ ಸಂಘದ ಹಿರಿಯ ಉಪಾಧ್ಯಕ್ಷ  ನವೀನ್ ಸ್ಟೀಫನ್ ವೇಗಸ್ ಅಭಿನಂದನಾ ಮಾತುಗಳ ಮೂಲಕ  ಕೃತಜ್ಞತೆಯ ಮಾತುಗಳನ್ನಾಡಿದರು..

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಡಬ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸವಣೂರು, ಶಿಕ್ಷಣ ಸಂಯೋಜಕ ಹರಿಪ್ರಸಾದ್, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ  ಮುಖ್ಯ ಗುರು ಸತೀಶ್ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ್, ಜನಾರ್ದನ ನೆಲ್ಯಾಡಿ, ಶಾಂತಪ್ಪ ಗೌಡ, ಶ್ರೀಮತಿ ಪ್ರವೀಣಾ ಪಾಪೆಮಜಲು, ಶಾಲಾ ಶಿಕ್ಷಣ ಇಲಾಖೆ ಸಂಘದ ಕೋಶಾಧಿಕಾರಿ  ಶ್ರೀಮತಿ ದೇವಕಿ, ಜಿಲ್ಲಾ ಪರಿಷತ್ ಸದಸ್ಯರಾದ ಶ್ರೀಮತಿ ಸ್ಮಿತಾಶ್ರೀ ಬಿ. ಲೆಕ್ಕಪರಿಶೋಧಕ ಸ್ಟಾನಿ ಪ್ರವೀಣ್ ಮಸ್ಕರೇನಸ್, ನಿರ್ದೇಶಕರಾದ ಶ್ರೀಮತಿ ಯಶೋಧ, ನರೇಶ್ ಲೋಬೊ, ರಾಜೇಶ್ ರೈ ಉದನೆ , ರಾಜೇಶ್ ನಾಯಕ್ ಮರ್ದಾಳ, ಶ್ರೀಮತಿ ವನಿತಾ, ಪ್ರಕಾಶ್ ಎನ್, ಜನಾರ್ದನ ದುರ್ಗಾ, ಉಪಸ್ಥಿತರಿದ್ದರು.

ಸಮೂಹ ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಮತಿ ಶಶಿಕಲಾ, ಶ್ರೀಮತಿ ಯಶೋಧ, ಪ್ರಕಾಶ್, ಜಯಂತ, ಶ್ರೀಮತಿ ಸೀತಮ್ಮ, ಶ್ರೀಮತಿ ಪರಮೇಶ್ವರಿ, ದೇವಪ್ಪ, ಗಣೇಶ, ನಾರಾಯಣ, ಶ್ರೀಮತಿ ಶಾಲಿನಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕವಿತಾ,  ನಾಗೇಶ, ಶ್ರೀಮತಿ ಗೀತಾ ಇವರುಗಳು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here