ಪೇರಲ್ತಡ್ಕ ಒಕ್ಕೂಟದ ತ್ರೈಮಾಸಿಕ ಸಭೆ, ತಂಬಾಕು ವಿರೋಧಿ ದಿನ, ನೂತನ ಒಕ್ಕೂಟ ರಚನೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಪುತ್ತೂರು  ಬೆಟ್ಟಂಪಾಡಿ ವಲಯದ ಪೇರಲ್ತಡ್ಕ ಒಕ್ಕೂಟದ ತ್ರೈಮಾಸಿಕ ಸಭೆ ಮತ್ತು ತಂಬಾಕು ವಿರೋಧಿ ದಿನಾಚರಣೆ ಬಗ್ಗೆ ಮಾಹಿತಿ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಜೂ.14 ರಂದು ನಡೆಯಿತು. 

ಪಂಚಾಯತ್ ರಾಜ್ ಸಂಸ್ಥೆ ತಾಲೂಕು ಪಂಚಾಯತ್ ಪುತ್ತೂರು ಇದರ ವಿದ್ಯಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  ತಂಬಾಕು ವಿರೋಧಿ ದಿನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

 ನೂತನ ಪದಾಧಿಕಾರಿಗಳ ಆಯ್ಕೆ- ಮುಂದಿನ ಎರಡು ವರ್ಷಗಳ ಅವಧಿಗೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಾವತಿ ಪಟ್ಟೆ,ಉಪಾಧ್ಯಕ್ಷರಾಗಿ ಸರೋಜ ಪೇರಲ್ತಡ್ಕ, ಸಂಯೋಜಕರಾಗಿ ಶಶಿಕಲಾ, ಪೇರಲ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ಸಂಧ್ಯಾ ಕರಂದ್ರೋಟ್ಟು, ಕೋಶಾಧಿಕಾರಿಯಾಗಿ ಸುಂದರ ಗೋಲಿಪದವು ಇವರನ್ನು ಆರಿಸಲಾಯಿತು.

ವಲಯ ಮೇಲ್ವಿಚಾರಕರು ಆದರ್ಶ್, ಸೇವಾಪ್ರತಿನಿಧಿ ಪದ್ಮಾವತಿ.ಡಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲ್ಲಿ ಸಿ.ಎಸ್.ಸಿ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಂಡು ಆನ್ಲೈನ್ ಮೂಲಕ ಪರೀಕ್ಷೆ ಬರೆದು ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here