ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಲಾ ಪ್ರಾರಂಭೋತ್ಸವ: ಸರಸ್ವತಿ ವಂದನಾ ಕಾರ್ಯಕ್ರಮ

0

ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ, ಪುತ್ತೂರು ಜಿಲ್ಲೆ ವತಿಯಿಂದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸರಸ್ವತಿ ವಂದನಾ ಕಾರ್ಯಕ್ರಮ ಭಾನುವಾರ ನಡೆಯಿತು.

ಪುತ್ತೂರು ಜಿಲ್ಲಾ ಗ್ರಾಮಾಂತರ ಪ್ರಭಾರಿಗಳಾದ ರವೀಂದ್ರನಾಥ ರೈ ಬಳ್ಳಮಜಲು ಮತ್ತು ಮಧು ನರಿಯೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಸಹ ಸಂಯೋಜಕರಾದ ಕೃಷ್ಣ ಕುಮಾರ್ ಅತ್ರೆಜಾಲು ಕಾರ್ಯಕ್ರಮವನ್ನು ಸಂಯೋಜಿಸಿದರು. ದೇವಸ್ಥಾನದ ಆಡಳಿತ ಸಮಿತಿ ಹಾಗೂ ಊರ ಗಣ್ಯರು ಸಹಕರಿಸಿದ್ದರು.ದೇವಳದ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಊರಿನ ವಿದ್ಯಾರ್ಥಿಗಳು, ಭಗವದ್ಭಕ್ತರಾದ ಬಂಧು-ಭಗಿನಿಯರು ಹಾಗೂ ಮಕ್ಕಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here