






ನಾಯಕ ಸುಜನ್ ಶಗ್ರಿತ್ತಾಯ, ಉಪನಾಯಕ ಅರವಿಂದ


ಪುತ್ತೂರು : ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ 2026-27ನೇ ಶೈಕ್ಷಣಿಕ ಸಾಲಿನ ಮಂತ್ರಿ ಮಂಡಲವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು. ನಾಯಕನಾಗಿ 10ನೇ ತರಗತಿಯ ಸುಜನ್ ಶಗ್ರಿತ್ತಾಯ ಮತ್ತು ಉಪನಾಯಕನಾಗಿ 9ನೇ ತರಗತಿಯ ಅರವಿಂದ ಆಯ್ಕೆಯಾದರು.



ಕ್ರೀಡಾ ಕಾರ್ಯದರ್ಶಿಗಳಾಗಿ ಧನುಷಾ ಟಿ., ಲೋಚನ್, ಶಿಕ್ಷಣ ಮಂತ್ರಿಗಳಾಗಿ ಮನ್ವಿತಾ ಪಿ. ಬಿ., ಸುಜನಾ, ಆರೋಗ್ಯ ಮಂತ್ರಿಗಳಾಗಿ ಮಾನ್ವಿ, ಯಶ್ವಿ, ಶಿಸ್ತು ಸಮಿತಿಗೆ ಧನ್ವಿ ಸುಧೀರ್, ಮಾನ್ಯ , ನೀರಾವರಿ ಮಂತ್ರಿಯಾಗಿ ಸಿಂಚನಾ, ಚಿತ್ತಾರ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪೂಜನ, ರಕ್ಷಾ, ಸುಜನ್, ಪ್ರಸಾರ ಸಮಿತಿಗೆ ದಿಗಂತ್, ಅನೀಶ್, ಶ್ರೀ ರಕ್ಷಾ ಇವರನ್ನು ಆಯ್ಕೆ ಮಾಡಲಾಯಿತು. ವಿರೋಧ ಪಕ್ಷದ ನಾಯಕರಾಗಿ 10ನೇ ತರಗತಿಯ ದೀಪಿಕಾ ಹಾಗೂ ೯ನೇ ತರಗತಿಯ ಆತ್ಮಿ, ಸ್ಪೀಕರ್ ಆಗಿ ಮಹೀನ್ ಕಶ್ಯಪ್ ಇವರನ್ನು ಆಯ್ಕೆ ಮಾಡಲಾಯಿತು.
ಶಿಕ್ಷಕಿಯರಾದ ಶ್ರೀಲಕ್ಷ್ಮೀ ಮೊಳೆಯಾರ್ ಹಾಗೂ ಹರ್ಷಿಣಿ ಇವರು ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಅಖಿಲಾ ಕೆ.ಬಿ ಇವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆಯ ನಡೆಸಿ ಕೊಟ್ಟರು.










