ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯು ಜೂ.20ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ವಿದ್ಯಾರ್ಥಿಯಾಗಿರುವ ಪುತ್ತೂರು ಪ್ರಾಪರ್ಟಿಸ್‌ನ ಮ್ಹಾಲಕ ನಿತಿನ್ ಪಕ್ಕಳ ಮಾತನಾಡಿ, ಇಂದಿನ ಆಹಾರ ಪದ್ದತಿಯಿಂದಾಗಿ ಮಾನವನ ಆರೋಗ್ಯ ಬಹಳಷ್ಟು ಕೆಟ್ಟಿದೆ. ಹೀಗಾಗಿ ಯೋಗ ಅನಿವಾರ್ಯ. ಯೋಗದಲ್ಲಿ ರೋಗ ನಿರೋಧಕ ಶಕ್ತಿಯಿದೆ. ನಿರಂತರ ಯೋಗ ಮಾಡುವುದರಿಂದ ನಮ್ಮಲ್ಲಿ ಆತ್ಮ ವಿಶ್ವಾಸ ಹಾಗೂ ದೃಢಸಂಕಲ್ಪ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ತಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಇತರರನ್ನು ಸೇರಿಸಿಕೊಳ್ಳಬೇಕು. ಇಂದರಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.


ಹಿರಿಯ ವಿದ್ಯಾರ್ಥಿನಿ, ಬೆಳ್ತಂಗಡಿ ಸುದ್ದಿ ಬಿಡುಗಡೆಯ ಸಿಇಓ ಆಗಿರುವ ಸಿಂಚನಾ ಊರುಬೈಲು ಮಾತನಾಡಿ, ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣವೇ ಯೋಗದ ಒಂದು ಭಾಗ. ಉತ್ತಮ ಪ್ರಜೆಯಾಗಿ ಬಾಳಲು ಯೋಗ ಸಹಕಾರಿ. ಲಿಟ್ಲ್ ಫ್ಲವರ್ ಶಾಲೆಯು ನಮಗೆ ಶಿಕ್ಷಣ ಜೊತೆಗೆ ಜೀವನಕ್ಕೆ ಭದ್ರ ಬುನಾದಿ ನೀಡಿದೆ. ಶಾಲಾ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಪ್ರಥಮ ಬಾರಿಗೆ ವೇದಿಕೆ ಕಲಿತ ಶಾಲೆಯಲ್ಲಿ ದೊರೆತಿದೆ ಎಂದರು.


ಹಿರಿಯ ವಿದ್ಯಾರ್ಥಿ ಸಂಘದ ನಿಯೋಜಿತ ಅಧ್ಯಕ್ಷ ಹಮೀದ್ ಕೂರ್ನಡ್ಕ ಮಾತನಾಡಿ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಹುದ್ದೆನೀಡಿದ್ದಾರೆ. ಶಾಲೆಯ ಅಭಿವೃದ್ಧಿಯಲ್ಲಿ ತನ್ನಿಂದಾಗುವ ಪ್ರಯತ್ನ ಮಾಡಲಾಗುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಯಾಚಿಸಿದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಗುರು ಭಗಿನಿ ಐರಿನ್ ವೇಗಸ್ ಮಾತನಾಡಿ, ಶತಮಾನದ ಹೊಸ್ತಿಲ್ಲಿರುವ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಕೊರತೆಯಿತ್ತು. ಈಗ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ನಮ್ಮ ಕನಸು ಈಡೇರಿದೆ ಎಂದರು.


ಶಾಲಾ ಹಿರಿಯ ವಿದ್ಯಾರ್ಥಿಗಳಾದ ಸೋಜ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ಮಂಗಳೂರು ಶ್ರೀಕಟೀಲ್ ಲಾಜಿಸ್ಟಿಕ್‌ನ ಜನಾರ್ದನ ಪೂಜಾರಿ ಪದಡ್ಕ, ಬಜಾಜ್ ಫೈನಾನ್ಸ್ ಮಂಗಳೂರು ಇದರ ಪ್ರಾದೇಶಿಕ ಪ್ರಬಂಧಕ ಪ್ರದೀಪ್, ಉದ್ಯಮಿ ಮಹಮ್ಮದ್ ಅಶ್ರಫ್ ಮುಕ್ವೆ, ಮರಿಕೆ ನ್ಯಾಚುರಲ್ ಐಸ್‌ಕ್ರೀಂನ ಸುಹಾಸ್ ಮರಿಕೆ, ದರ್ಬೆ ಕೋಸ್ಟಲ್ ಹೋಮ್‌ನ ಸಂದೇಶ್ ರೈ ಸಂಪ್ಯ, ಖ್ಯಾತ ಹಿನ್ನೆಲೆ ಗಾಯಕ ವಿನೋದ್ ಆಚಾರ್ಯ ಮಾತನಾಡಿ ಶುಭಹಾರೈಸಿದರು, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಮೊಟ್ಟೆತ್ತಡ್ಕ, ಸದಸ್ಯ ಪ್ರವೀಣ್, ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಭಟ್, ನಿವೃತ್ತ ಶಿಕ್ಷಕರಾದ ಜೋಸೆಫ್ ಕೆ.ಪಿ., ಸಬೀನಾ ಲಸ್ರಾದೋ, ಮೇರಿ ಡಿಸಿಲ್ವಾ, ರೋಸ್ಲಿನ್ ಡಿಸಿಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಾತ್ವಿಕ ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಯೋಗ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here