






ನಾಯಕಿಯಾಗಿ ಜಲಜಾಕ್ಷಿ 8ನೇ ತರಗತಿ ,ಉಪನಾಯಕನಾಗಿ ಪ್ರಜೀತ್ ಪಿ ಕೆ 7ನೇ ತರಗತಿ


ದರ್ಬೆತ್ತಡ್ಕ: ದರ್ಬೆತ್ತಡ್ಕ ಶಾಲಾ ಮಂತ್ರಿ ಮಂಡಲ ಚುನಾವಣೆ ಇವಿಎಂ ಮಾದರಿಯಲ್ಲಿ ನಡೆಯಿತು. ಚುನಾವಣೆ ಮೂಲಕ ಶಾಲಾ ನಾಯಕ ಹಾಗೂ ಉಪನಾಯಕನ ಆಯ್ಕೆ ನಡೆಯಿತು. ಶಾಲಾ ನಾಯಕಿಯಾಗಿ ಜಲಜಾಕ್ಷಿ 8ನೇ ತರಗತಿ ,ಉಪನಾಯಕನಾಗಿ ಪ್ರಜೀತ್ ಪಿ ಕೆ 7ನೇ ತರಗತಿ ಆಯ್ಕೆಯಾಗಿದ್ದಾರೆ.




ವಿರೋಧ ಪಕ್ಷದ ನಾಯಕನಾಗಿ ತೇಜಸ್ ಎಲ್ ಕೆ,8ನೇ ತರಗತಿ, ವಿರೋಧ ಪಕ್ಷದ ಉಪ ನಾಯಕನಾಗಿ ಪ್ರಜ್ವಲ್ 7ನೇ ತರಗತಿ, ಗೃಹ ಮಂತ್ರಿಯಾಗಿ ಯಜ್ಞೆಶ್, ಉಪ ಗೃಹ ಮಂತ್ರಿಯಾಗಿ ಲಕ್ಷಿತ್ ನಾಯ್ಕ್ ಎಸ್ , ಶಿಕ್ಷಣ ಮಂತ್ರಿಯಾಗಿ ಕೃತಿಕ, ಉಪ ಶಿಕ್ಷಣಮಂತ್ರಿಯಾಗಿ ಜಾಹ್ನವಿ ಡಿ.ಜಿ, ಸ್ವಚ್ಛತಾ ಮಂತ್ರಿಯಾಗಿ ರಚನ್ ಕುಮಾರ್ , ಉಪ ಸ್ವಚ್ಛತಾ ಮಂತ್ರಿಯಾಗಿ ತಸ್ವಿನ್ ಆರ್ ಎಚ್, ಶಿಸ್ತು ಮಂತ್ರಿಯಾಗಿ ಎಸ್ ತೇಜಸ್ ನಾಯ್ಕ್ , ಉಪ ಶಿಸ್ತು ಮಂತ್ರಿಯಾಗಿ ವನೀಜ್ ಕರ್ಕೇರ ಬಿ,ನೀರಾವರಿ ಮತ್ತು ಕೃಷಿ ಮಂತ್ರಿಯಾಗಿ ಲಕ್ಷ್ಮೀಶ,ಉಪ ನೀರಾವರಿ ಮತ್ತು ಕೃಷಿಮಂತ್ರಿಯಾಗಿ ಶ್ರೀಶಕುಮಾರ್ ಬಿ, ಕ್ರೀಡಾ ಮಂತ್ರಿಯಾಗಿ ಡಿ ತೆನಿಶ್ ನಾಯ್ಕ್ ,ಉಪ ಕ್ರೀಡಾ ಮಂತ್ರಿ ಯಾಗಿ ಆರುಶ್ ಜಿ.ಕೆ, ಆರೋಗ್ಯ ಮಂತ್ರಿಯಾಗಿ ಯಶಸ್ವಿನಿ.ಡಿ, ಉಪ ಆರೋಗ್ಯಮಂತ್ರಿಯಾಗಿ ಜಸ್ಮಿತ.ಡಿ, ಆಹಾರ ಮಂತ್ರಿಯಾಗಿ ಲಿಖಿತ, ಉಪ ಆಹಾರ ಮಂತ್ರಿಯಾಗಿ ಮನ್ವಿ.ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಜಲಜಾಕ್ಷಿ , ಉಪ ಸಾಂಸ್ಕೃತಿಕ ಮಂತ್ರಿ ಹಾಗೂ ಸಭಾಪತಿಯಾಗಿ ಪೃಥ್ವಿ.ಕೆ,ಉಪಸಭಾಪತಿಯಾಗಿ ಹರ್ಷಿಣಿ ಆಯ್ಕೆಯಾಗಿದ್ದಾರೆ.
ಪ್ರಭಾರ ಮುಖ್ಯ ಶಿಕ್ಷಕಿ ರಮ್ಯಾ ಎಸ್ ರವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕಿಯರಾದ ಯೋಗಿನಿ ಆರ್, ಮೋಹಿತ ಕೆ, ಧನಲಕ್ಷ್ಮೀ ಹಾಗೂ ಶಿಲ್ಪಾ ಜಿ ರೈ ಚುನಾವಣಾ ಪ್ರಕ್ರಿಯೆ ನಡೆಸಿದರು. ವಿದ್ಯಾರ್ಥಿಗಳು ಶಾಲಾ ನಾಯಕ ಹಾಗೂ ಉಪನಾಯಕನ ಸ್ಥಾನಕ್ಕೆ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಇವಿಎಂ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ನಂತರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮಂತ್ರಿಗಳು ಹಾಗೂ ಉಪ ಮಂತ್ರಿಗಳು ತಮ್ಮ ತಾಯಿಯ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. GPT ಜಿ.ಪಿಟಿ ಶಿಕ್ಷಕ ಮಂಜನಾಯ್ಕ ಪಿ ಪ್ರಮಾಣ ವಚನ ಬೋಧಿಸಿದರು.









