






ಮುಖ್ಯಮಂತ್ರಿಯಾಗಿ ಅಹನ್ ಜೈನ್, ಉಪಮುಖ್ಯಮಂತ್ರಿಯಾಗಿ ಹಿನಾ ಫಾತಿಮಾ, ತಸ್ವಿ ಆಯ್ಕೆ


ಪುತ್ತೂರು: ಸಂತವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು.ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿ ಮತದಾನ ಚಲಾಯಿಸಿದರು.



ಮುಖ್ಯಮಂತ್ರಿಯಾಗಿ ಅಹನ್ ಜೈನ್ ಹಾಗೂ ಉಪಮುಖ್ಯಮಂತ್ರಿಗಳಾಗಿ ಹಿನಾ ಫಾತಿಮಾ ಮತ್ತು ತಸ್ವಿ ಹಾಗೂ ಉಳಿದ ಮಂತ್ರಿ ಮಂಡಲದ ಸದಸ್ಯರೊಂದಿಗೆ ಮಂತ್ರಿಮಂಡಲದ ರಚನೆಯ ಕಾರ್ಯಕ್ರಮವು ಜೂ.25ರಂದು ನಡೆಸಲಾಯಿತು. ಚುನಾವಣಾ ಅಧಿಕಾರಿಗಳಾಗಿ ಶಾಲೆಯ ಸಹಶಿಕ್ಷಕರಾದ ಐರಿನ್ ಮಾರ್ಥ ಲೀನಾ ಪಯಸ್ ಮತ್ತು ರೀಟಾ ಕಾರ್ಯನಿರ್ವಹಿಸಿದರು.
ಮೈ ದೆ ದೇವಸ್ ಸಂಸ್ಥೆಯ ಪ್ರಧಾನ ಸಂಚಾಲಕ ಅತಿ ವಂದನೀಯ ಫಾದರ್ ಡಾ| ಜಾನ್ ಬಾಪ್ಟಿಸ್ಟ್ ಸಲ್ಡಾನ , ಅಧ್ಯಕ್ಷ ಸ್ಥಾನ ವಹಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೊಸದಾಗಿ ಆಯ್ಕೆಕೊಂಡ ಎಲ್ಲಾ ನಾಯಕರುಗಳಿಗೆ ಶುಭ ಹಾರೈಸಿದರು ಮತ್ತುಶಾಲಾ ಮಂತ್ರಿಮಂಡಲ ವರ್ಗ ಯಾವ ರೀತಿ ಕಾರ್ಯನಿರ್ವಹಿಸಬೇಕು ಮತ್ತು ಅದರ ಪ್ರಾಮುಖ್ಯತೆ ಏನೆಂದು ತಿಳಿಸಿದರು.
ಶಾಲಾ ಮಂತ್ರಿ ಮಂಡಲದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.










