ಪರ್ಪುಂಜ : ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘಕ್ಕೆ ಆಯ್ಕೆ

0

ಅಧ್ಯಕ್ಷ: ರಾಕೇಶ್ ರೈ ಪರ್ಪುಂಜ, ಪ್ರ.ಕಾರ್ಯದರ್ಶಿ: ಮಹಮ್ಮದ್ ಕೆ

ಪುತ್ತೂರು: ಪರ್ಪುಂಜ ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಸಭೆಯು ಜೂ. ೨೮ ರಂದು ಪರ್ಪುಂಜದ ರಾಜ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರಾಕೇಶ್ ರೈ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಕಾರ್ಯದರ್ಶಿ ಮಹಮ್ಮದ್ ಅವರು ಸ್ವಾಗತಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಸಭೆಗೆ ಆಗಮಿಸಿದ್ದ ಒಳಮೊಗ್ರು ಬೀಟ್ ಪೊಲೀಸ್ ವೆಂಕಪ್ಪ ಅವರು ಸಭಿಕರಿಗೆ ಸೂಕ್ತ ಸಲಹೆ ಮತ್ತು ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಪದಾಧಿಕಾರಿಗಳಾಗಿ ಗೌರವ ಸಲಹೆಗಾರರಾಗಿ ಪ್ರೇಮ್ ರಾಜ್ ರೈ ಪರ್ಪುಂಜ ಮತ್ತು ಮಹಮ್ಮದ್ ಜೆ.ಜೆ.ಬಿ ಪರ್ಪುಂಜ, ಗೌರವಾಧ್ಯಕ್ಷರಾಗಿ ಸಾಮಾಜಿಕ ಮುಂದಾಳು ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರಾಗಿ ರಾಕೇಶ್ ರೈ ಪರ್ಪುಂಜ, ಉಪಾಧ್ಯಕ್ಷರಾಗಿ ಹಮೀದ್ ಗಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕೆ. ಜೊತೆ ಕಾರ್ಯದರ್ಶಿಗಳಾಗಿ ಮಹಾಬಲ ನಾಯ್ಕ್ ಖಂಡಿಗ, ಸುರೇಶ್ ಪೂಜಾರಿರವರುಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ರಾಜೇಶ್ ಪೂಜಾರಿ ಪಿಡಪಟ್ಲ, ಮಾಜಿ ಕಾರ್ಯದರ್ಶಿ ರಾಜೇಶ್ ಗೌಡ ಶೇಡಿಗುಂಡಿ ಹಾಗೂ ಸಂಘದ ಸದಸ್ಯರಾದ ಅಬ್ಬಾಸ್, ಸಂಜೀವ ಪೂಜಾರಿ, ಫಾರೂಕ್, ನವಾಜ್ ಪರ್ಪುಂಜ, ಕೆ. ಅಬ್ದುಲ್ ಅಮೀದ್ ಅಡ್ಕ , ಕೃಷ್ಣ ನಾಯ್ಕ್, ಯು. ಅಂಝ, ಪ್ರವೀಣ್, ಆಶೀಫ್, ಶಾಫಿ ಇಡಿಂಜಿಲ, ಶಿವರಾಮ ನಿರ್ಪಾಡಿ, ಗೋವಿಂದ ನಾಯ್ಕ್ ಖಂಡಿಗ, ರಫೀಕ್ ಮತ್ತು ಇಸುಬು ಇಡಿಂಜಿಲ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here