ಜು.3ಕ್ಕೆ ಎಸ್ ಎಲ್ ವಿ ಕಲರ್ಸ್ ನಿರ್ಮಾಣದ ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಅಭಿನಯದ “ಅಪರಾಧಿ ನಾನಲ್ಲ” ಕನ್ನಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

0

ಪುತ್ತೂರು: ಎಸ್. ಎಲ್. ವಿ. ಕಲರ್ಸ್ ನಿರ್ಮಾಣದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಅಭಿನಯದ “ಅಪರಾಧಿ ನಾನಲ್ಲ” ಕನ್ನಡ ಸಿನಿಮಾ ಜು. 3 ಕ್ಕೆ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಕಾಣಲಿದೆ.

ಯಶಂತ್ ಕಲ್ಲಡ್ಕ ನಿರ್ದೇಶನದ ಅಪರಾಧಿ ನಾನಲ್ಲ ಚಿತ್ರ ಎಸ್ ಎಲ್ ವಿ ಕಲರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ನಾಯಕ ನಟಿಯಾಗಿ ಅಮೃತ ಮೂರ್ತಿ, ಶ್ರೀಶಾ ಸಾಮಾನಿ ಹಾಗೂ ಕನ್ನಡ, ತೆಲುಗು ಸಿನಿಮಾ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ ಪಡೀಲ್, ಅರ್ಜುನ್ ಕಜೆ, ಅನೂಪ್ ಸಾಗರ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದೀಗ ಟ್ರೈಲರ್ ಮೂಲಕ ಭಾರೀ ಸದ್ದು ಮಾಡಿರುವ ವಿಭಿನ್ನ ಕಥೆಯನ್ನೊಳಗೊಂಡ ಅಪರಾಧಿ ನಾನಲ್ಲ ಸಿನಿಮಾ ಜು. 3 ರಂದು ರಾಜ್ಯದ್ಯಂತ ತೆರೆ ಕಾಣಲು ಸಿದ್ದವಾಗಿದೆ.

ಟ್ರೈಲರ್ ಬಿಡುಗಡೆ
ಕೆಲದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆಮಾಡಲಾಗಿದೆ. ಇದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿನ ಸಸ್ಪೆನ್ಸ್ ಮತ್ತು ರೋಚಕ ದೃಶ್ಯಗಳು ಗಮನ ಸೆಳೆಯುತ್ತಿವೆ.

LEAVE A REPLY

Please enter your comment!
Please enter your name here