ನರಿಮೊಗರು:ಯಂತ್ರ ಶ್ರೀ ಭತ್ತ ನಾಟಿಯ ಕುರಿತು ರೈತರಿಗೆ ಮಾಹಿತಿ, ಪ್ರಾತ್ಯಕ್ಷಿಕೆ

0

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿoಜೆ ವಲಯದ ವತಿಯಿಂದ ಯಂತ್ರ ಶ್ರೀ ಭತ್ತ ನಾಟಿಯ ಕುರಿತು ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿ ವೇದನಾಥ ಸುವರ್ಣ ಮಾತನಾಡಿ, ಧರ್ಮಸ್ಥಳ ದ ಯಂತ್ರ ಶ್ರೀ ಮಾದರಿ ಕಾರ್ಯಕ್ರಮ ಆಗಿದ್ದು ನಮ್ಮಭತ್ತ ಕೃಷಿ ಗೆ ಯಂತ್ರಿಕ ಸ್ಪರ್ಶ ನೀಡಿ ರೈತರಿಗೆ ವರದಾನ ಆಗಿದೆ ಎಂದರು.


ಉಡುಪಿ ನಾಟಿ ಯಂತ್ರ ಬ್ಯಾಂಕ್ ಮೇಲ್ವಿಚಾರಕ ಅಕ್ಷಯ್ ಪ್ರಾತ್ಯಕ್ಷಿಕೆ ಮತ್ತು ಯಂತ್ರ ಶ್ರೀ ಸಸಿ ಮಾಡಿ ಹಾಗೂ ನಾಟಿ ಕುರಿತು ಮಾಹಿತಿ ನೀಡಿದರು. ಯೋಧ ಜಗದೀಶ್ ಬಲ್ನಾಡು ಮಾದರಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಪ್ರಸ್ತಾವಿಕ ವಾಗಿ ಮಾತನಾಡಿದರು.


ಪ್ರಗತಿ ಪರ ಕೃಷಿಕ ಶ್ರೀದರ್ ಎಂ ಉಪಸ್ಥಿತರಿದ್ದರು.ಸೇವಾಪ್ರತಿನಿಧಿ ಯಶೋಧ. ಕೆ. ಗೌಡ ಸ್ವಾಗತಿಸಿ, ಯಮುನಾ ವಂದಿಸಿದರು… ಕೃಷಿ ಮೇಲ್ವಿಚಾರಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here