ಕುರಿಯ ‌‌‌ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ

0

ಪುತ್ತೂರು : ಕುರಿಯ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದಲ್ಲಿ ಜು. 3 ರಂದು ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಮಹಾಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಮಂಡಲ ಪೂಜೆ, ಆಶ್ಲೇಷ ಬಲಿ ಪೂಜೆ , ಅನುಜ್ಞಾ ಕಳಸ ಪೂಜೆ ಹಾಗೂ ದೇವಸ್ಥಾನದ ಬಲಭಾಗದ ಗುಡ್ಡದಲ್ಲಿ ನೆಲೆಯಾಗಿರುವ ತಾಯಿ ರಕ್ತೇಶ್ವರಿ, ಮತ್ತು ಪರಿವಾರ ದೈವಗಳಿಗೆ ಗುಡಿ ಕಟ್ಟುವುದು, ಸ್ಥೂಪ ನಿರ್ಮಿಸುವುದು ಹಾಗೂ ಸುತ್ತ ಕಟ್ಟೆ ನಿರ್ಮಿಸುವ ಪ್ರಯುಕ್ತ ಸ್ಥಳ ಶುದ್ದಿ, ಅನುಜ್ಞಾ ಕಳಸ ಕಾರ್ಯ ನಡೆಯಿತು.

ಕೆಮ್ಮಿಂಜೆ ಬ್ರಹ್ಮ ಶ್ರೀ ಲಕ್ಷೀಶ ತಂತ್ರಿಗಳ ಆಶೀರ್ವಾದ ದೊಂದಿಗೆ ಬ್ರಹ್ಮಶ್ರೀ ಶಚೀಂದ್ರ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆದ ಪೂಜೆ ಮತ್ತು ಹವನಗಳ ದೇವತಾ ಕಾರ್ಯದಲ್ಲಿ ವೇದ ಮೂರ್ತಿಗಳಾದ ರಮೇಶ ಪೂದಣ್ಣಾಯ, ಹರೀಶ್ ಭಟ್, ಸಚ್ಚಿದಾನಂದ ಕೆದಿಲಾಯ, ಶ್ರೀಪತಿ ಬೈಪಡಿತ್ತಾಯ, ಆಶ್ರಿತ್ ಪೂದಣ್ಣಾಯ, ಶಿವರಾಮ ಕೇಕುಣ್ಣಾಯ, ವೆಂಕಟ ಕೃಷ್ಣ ಭಾಗವತ್, ಭಾಗವಹಿಸಿದ್ದರು.

ದೇವಸ್ಥಾನದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳಿಗೆ ಎಂ‌. ವಾಸುದೇವ ಹೊಳ್ಳ ಮತ್ತು ಎಂ. ಪ್ರಪುಲ್ಲ ಚಂದ್ರ ಹೊಳ್ಳ ಸಹಕರಿಸಿದರು. ದೇವಸ್ಥಾನದ ಅರ್ಚಕ ವೃಂದದ‌ ಪ್ರಕಾಶ್ ಕುಮಾರ್, ವಿಷ್ಣು ಅಡಿಗ, ವಿಷ್ಣು ಬಡಿಕಿಲ್ಲಾಯ ದೇವತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ದೇವಸ್ಥಾನದ ವ್ಯಸ್ಥಾಪನಾ ಸಮಿತಿಯ ಗೌರವ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಅಧ್ಯಕ್ಷ ಜಯರಾಮ ರೈ ಅಡ್ಯೆತ್ತಿಮಾರ್, ಕಾರ್ಯದರ್ಶಿ ಹರೀಶ್ ಡಿಂಬ್ರಿ ಹಾಗೂ ಸಮಿತಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ದೇವತಾ ಕಾರ್ಯದ ಯಶಸ್ಸಿಗೆ ಶ್ರಮಿಸಿದರು.

ಜು. 3 ರಂದು ಬೆಳಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾದ ಪೂಜಾ ಕಾರ್ಯಗಳು ಮಧ್ಯಾಹ್ನ ಎರಡು ಗಂಟೆಗೆ ಸಂಪನ್ನಗೊಂಡಿತು. ನೂರಾರು ಭಕ್ತರು ದೇವತಾ ಕಾರ್ಯದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here