ಕುಂಜಾರು ದೇವಸ್ಥಾನದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ವಿತರಣೆ

0

ಪ್ರತಿ ಮನೆಗೂ ವಿಜ್ಞಾಪನಾ ಪತ್ರ – ಈಶ್ವರ ಭಟ್ ಪಂಜಿಗುಡ್ಡೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದೆ. ಈ ಸಂದರ್ಭ ಭಕ್ತರ ಪೂರ್ಣ ಸಹಕಾರ ಸಮರ್ಪಣೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಮನೆಗೂ ವಿಜ್ಞಾಪನಾ ಪತ್ರ ತಲುಪಬೇಕಾಗಿದೆ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಿನಂತಿಸಿದ್ದಾರೆ.
ಕುಂಜಾರು ಶ್ರೀ ಮದಗ ಜನಾರ್ದನ ದೇವಸ್ಥಾನದಲ್ಲಿ ಜು.೫ರಂದು ರಾತ್ರಿ ದುರ್ಗಾಪೂಜೆಯ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ವಿಜ್ಞಾಪನಾ ಪತ್ರವನ್ನು ವಿತರಿಸಿ ಮಾತನಾಡಿದರು. ಈ ಸಂದರ್ಭ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರೆಕರೆ, ಚೈತ್ರನಾರಾಯಣ ಸೇಡಿಯಾಪು, ಬಾಳಪ್ಪ ನಾಯ್ಕ ಕುಂಜಾರು, ರೋಹನ್‌ರಾಜ್, ಬಾಲಕೃಷ್ಣ ನಾಯ್ಕ್ ಮಾಲ್ತೊಟ್ಟು, ಉಮೇಶ್ ನಾಯಕ್, ಶವೀನ್ ಕುಂಜಾರು, ಯಶೋಧರ ಕುಂಜಾರು, ಕಿಶೋರ್ ಕುಂಜಾರು, ಜಗತ್, ಬಾಲಕೃಷ್ಣ ಜೋಯಿಸ, ಹರೀಶ್ ನಾಯ್ಕ್ ಮಾಲ್ತೊಟ್ಟು, ಕೆ.ಟಿ ಮುರಳಿ, ಸ್ವಪ್ನಚೈತ್ರ ನಾರಾಯಣ್, ಶ್ರೀಧರ ಕುಂಜಾರು, ಶಿವಾನಂದ ದೇಂತಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here