ಪಟ್ಟೆ: ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಕಥೆ – ಕವಿತೆ ರಚನೆಯ ಕಮ್ಮಟ 

0

ಬಡಗನ್ನೂರು: “ಮನುಷ್ಯ ತಾನು ಅಭಿವೃದ್ಧಿ ಆಗಬೇಕಾದರೆ ಹೊಸ ರೀತಿಯಲ್ಲಿ ಯೋಚಿಸಬೇಕು. ಹಿರಿಯರು ಹಾಕಿದ ಪಂಕ್ತಿಯನ್ನು ಅನುಸರಿಸಬೇಕು. ಸಾಹಿತ್ಯ ರಚನೆಯಿಂದ ಒಬ್ಬ ವ್ಯಕ್ತಿ ಹೆಸರು ಮಾಡಿದಾಗ ಆ ಊರಿಗೆ, ಆತನಿರುವ ಸಂಸ್ಥೆಗೆ ಹೆಸರು ಬರುತ್ತದೆ “ಎಂದು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ  ಗೋಪಾಲಕೃಷ್ಣ ಭಟ್ ರವರು. ಹೇಳಿದರು.

ಅವರು ಜು.12 ರಂದು ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪುತ್ತೂರು ತಾಲೂಕು ಸಮಿತಿ ಮತ್ತು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ನಡೆಸಿದ ‘ಕಥೆ-ಕವಿತೆ ರಚನೆಯ ಕಮ್ಮಟ’ವನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ’ ಹಾಗೂ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ಅವರು ಪ್ರಾಸ್ತಾವಿಕ ಮಾತಾಡಿ “ಮಕ್ಕಳಲ್ಲಿ ಸದಾ ಹೊಸತು ಬಯಸುವ ಜಾಯಮಾನ ಇದೆ. ಹೊಸ ಹೊಸ ರೀತಿಯಲ್ಲಿ ಯೋಚನೆ, ಮಾತು, ವಿನ್ಯಾಸಗಳಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಇಂತಹ ಕಮ್ಮಟವನ್ನು ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕಾಗಿ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ  ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ  ಗಣರಾಜ ಕುಂಬ್ಳೆ,, ರಾಜಗೋಪಾಲ್ ಭಟ್ ಪಟ್ಟೆ,  ನವೀನಕೃಷ್ಣ ಎಸ್. ಉಪ್ಪಿನಂಗಡಿ, ಶ್ರೀಶಾವಾಸವಿ ತುಳುನಾಡು ಇವರುಗಳು  ವಿದ್ಯಾರ್ಥಿಗಳಿಗೆ ಕಥೆ- ಕವಿತೆ ರಚನೆಯ ಬಗ್ಗೆ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.

ಪ್ರೌಢಶಾಲಾ ಮುಖ್ಯಗುರು  ಸುಮನಾ ಬಿ.ರವರು ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿ   ಚಿತ್ರಾ  ವಂದಿಸಿದದರು.ಆಂಗ್ಲ ಮಾಧ್ಯಮ ವಿಭಾಗದ ನವ್ಯಶ್ರೀ  ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ  ಶಾಲೆಗಳಿಂದ ಸುಮಾರು 50 ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here