






ಪುತ್ತೂರು : ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ‘ ರಜತ ಪಲ್ಲವ ‘ ಸರಣಿ ಕಾರ್ಯಾಗಾರದ ಮೂರನೇ ತರಬೇತಿ ಕಾರ್ಯಕ್ರಮ ಜು.10ರಂದು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯಿತು.


ಸಂಪನ್ಮೂಲ ವ್ಯಕ್ತಿ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ Mater of physiotherapy ಸುಷ್ಮಾ ಬಿ ಹಿರೇಮಠ್ ನಡೆಸಲ್ಪಟ್ಟ ಈ ಕಾರ್ಯಗಾರದಲ್ಲಿ ಪ್ರಮುಖವಾಗಿ ಸಂವಹನ ಕೌಶಲ್ಯ ದ ಬಗ್ಗೆ ತರಬೇತಿಯನ್ನು ಹಾಗೂ ಅದರ ವಿಧಾನ ಮತ್ತು ಅಗತ್ಯತೆ ಗಳನ್ನು ತಿಳಿಸಿದರು.
ಮಕ್ಕಳೊಡನೆ ಸಂವಾದ ನಡೆಸುವ ಮೂಲಕ ಅವರ ಅನೇಕ ಸಂಶಯಗಳಿಗೆ ಉತ್ತರ ನೀಡುವುದರ ಮೂಲಕ ಮಕ್ಕಳಿಗೆ ಉಪಯುಕ್ತವಾಗುವಂತಹ ಅನೇಕ ಮಾಹಿತಿಗಳನ್ನು ನೀಡಿದರು.




ಈ ಕಾರ್ಯಗಾರದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಶಾಲಾ ಕೋಶಾಧಿಕಾರಿ ಹರೀಶ್ ಪುತ್ತೂರಾಯ,JC trainer ವೇಣುಗೋಪಾಲ್ ಮತ್ತು ಮುಖ್ಯ ಶಿಕ್ಷಕ ಪ್ರಸನ್ನ ಕೆ ಉಪಸ್ಥಿತರಿದ್ದರು.ತರಬೇತಿ ಕಾರ್ಯಕ್ರಮದ ಸoಯೋಜಕಮ ಸಹ ಶಿಕ್ಷಕ ಆನಂದ್ ಆರ್ ರವರು ಸ್ವಾಗತಿಸಿದರು. ಸಹ ಶಿಕ್ಷಕಿ ವಾಣಿ ವಂದಿಸಿದರು.










