ನವೋದಯ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು 9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

0

ಪುತ್ತೂರು:ಜೂನ್ 5 ರಂದು ನವೋದಯ ಪ್ರೌಢ ಶಾಲಾ ಸಭಾಂಗಣದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಪುಷ್ಟರಾಜ ಶೆಟ್ಟಿ ಭೈರಮಜಲು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಾಲಾ ಇಕೋ ಕ್ಲಬ್ ನ ಮಾರ್ಗದರ್ಶಕ ಭುವನೇಶ್ವರಿ ಎಂ ಪರಿಸರದಲ್ಲಿ ಶುದ್ಧ ವಾಯು, ಪ್ರಾಣಿ, ಪಕ್ಷಿಗಳಿಂದ ಮನುಷ್ಯನಿಗಾಗುವ ಪ್ರಯೋಜನ, ಪರಿಸರ ಸಂರಕ್ಷಣೆಯಿಂದ ಪ್ರಾಣರಕ್ಷಣೆಯೇ ಮೊದಲಾದ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಣಿಪಾಲ್ ಫೌಂಡೇಶನ್ ವತಿಯಿಂದ ನೀಡಲಾದ ಉಚಿತ ಬ್ಯಾಗ್ ಗಳನ್ನು ಶಾಲಾ ಸಂಚಾಲಕ ಪುಷ್ಪರಾಜ್ ಶೆಟ್ಟಿ ಇವರು ವಿತರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಗುರು ಪುಷ್ಪಾವತಿ ಎಸ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅಧ್ಯಾಪಕ ರಾಧಾಕೃಷ್ಣ ಕೋಡಿ, ಬಾಲಕೃಷ್ಣ ಕೆ, ಗೌತಮಿ ಎಂ.ಬಿ, ಸುಮಂಗಲಾ ಕೆ, ಉಪಸ್ಥಿತರಿದ್ದರು. ಶಿಕ್ಷಕೇತರ ಸಿಬ್ಬಂದಿ ನಾರಾಯಣ ಬನ್ನಿಂತಾಯ ಸಹಕರಿಸಿದರು. ಸಂಸ್ಕೃತ ಅಧ್ಯಾಪಿಕೆ ಶೋಭಾ ಬಿ ವಂದಿಸಿದರು.

LEAVE A REPLY

Please enter your comment!
Please enter your name here