ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯಲ್ಲಿ ಕಾರ್ಗಿಲ್ ವಿಜಯೋತ್ಸವ: ನಿವೃತ್ತ ಯೋಧ ಶೇಷಪ್ಪ ಗೌಡ ಹಡೀಲುವರಿಗೆ ಗೌರವಾರ್ಪಣೆ

0

ಈಶ್ವರಮಂಗಲ: ಧರ್ಮಶ್ರೀ ಪ್ರತಿಷ್ಠಾನ (ರಿ.) ಶ್ರೀ ಕ್ಷೇತ್ರ ಹನುಮಗಿರಿ ಹಾಗೂ ಕ್ಷೇತ್ರ ಸಂವರ್ಧನಾ ಸಮಿತಿಯ ಆಶ್ರಯದಲ್ಲಿ ಅಮರಗಿರಿಯ ಶ್ರೀ ಭಾರತೀ ಅಮರ ಜ್ಯೋತಿ ಮಂದಿರದಲ್ಲಿ ಜು.26ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಶೇಷಪ್ಪ ಗೌಡ ಹಡೀಲು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೇತ್ತಾಯ ವಹಿಸಿ ಮಾತನಾಡಿ, ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯಲ್ಲಿ ಕಾರ್ಗಿಲ್ ವಿಜಯೋತ್ಸವ. ಸ್ವಾತಂತ್ರ್ಯ ದಿನಾಚರಣೆ, ಅಮರಗಿರಿ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಉದ್ಘಾಟನೆಯ ದಿನವಾಗಿ ಆಚರಿಸುತ್ತೇವೆ, ದೇಶ ಭಕ್ತಿಯ ಕಾರ್ಯಕ್ರಮವನ್ನು ಯಾರಾದರು ಇಲ್ಲಿ ಮಾಡಲು ಅವಕಾಶಕಲ್ಲಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ವಕೀಲ ಪ್ರಸಾದ್ ಕುಮಾರ್, ಪ್ರಗತಿಪರ ಕೃಷಿಕ ಕೃಷ್ಣ ಪ್ರಸಾದ್ ಭಟ್ ಹಾಗೂ ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಕೆ. ಭಾಗವಹಿಸಿ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಿದರು.

ನಿವೃತ್ತ ಸೈನಿಕ ಶೇಷಪ್ಪ ಗೌಡ ಹಡೀಲು ಮಾತನಾಡಿ ಅವರು ಸೈನಿಕ ವೃತಿಯ ಅನುಭವವನ್ನು ಹಂಚಿಕೋಡರು.ಹರಿಪ್ರಸಾದ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಮುಂಡ್ಯ ಶ್ರೀಕೃಷ್ಣ ಭಟ್, ಧರ್ಮದರ್ಶಿ ಶಿವರಾಮ ಪಿ, ನಿವೃತ್ತ ಶಿಕ್ಷಕ ಸದಾಶಿವ ರೈ, ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೋಮ್ಮೆಟ್ಟಿ, ನಿವೃತ್ತ ಶಿಕ್ಷಕ ಶಿವರಾಮ ಶರ್ಮ ಸಹಕರಿಸಿದರು. ಶಿಕ್ಷಕಿ ರಾಜಶ್ರೀ, ದೇಶ ಭಕ್ತಿಗೀತೆ, ರಜತ್ ಬಸಿರಡ್ಕ ವೈಯಕ್ತಿ ಗೀತೆ ಹಾಡಿದರು, ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿದರು, ರಾಜೇಂದ್ರ ಪ್ರಸಾದ್ ಮೇನಾಲ ನಿರೂಪಿಸಿ ನಿವೃತ ಸೈನಿಕ ಸುಬ್ಬಪ್ಪ ಪಾಟಾಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಂವರ್ಧನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here