ಕಲ್ಪಡ ಸ್ನೇಹಿತರ ಬಳಗದ ದಶಮ ಸಂಭ್ರಮದ ಅಂಗವಾಗಿ ಉಚಿತ ಆರೋಗ್ಯ ಮಾಹಿತಿ, ತಪಾಸಣಾ ಶಿಬಿರ

0

ಕಾಣಿಯೂರು: ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಆರಂಭಿಕ ಹಂತದಲ್ಲೇ ಅವುಗಳಿಗೆ ಚಿಕಿತ್ಸೆ ಪಡೆಯಬೇಕು. ಉಚಿತ ಆರೋಗ್ಯ ಶಿಬಿರಗಳಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಕಾಣಿಯೂರು ಕುಮಾರ್ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಹೇಳಿದರು.

ಅವರು ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ದಶಮ ಸಂಭ್ರಮದ ಅಂಗವಾಗಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಂಗಳೂರು ಇವರ ಸಹಯೋಗದಲ್ಲಿ ಜು 26 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೂವಪ್ಪೆ ಇಲ್ಲಿ ನಡೆದ ಉಚಿತ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಗುತ್ತು ವಹಿಸಿದ್ದರು. ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷರಾದ ಶಿವರಾಮ ಉಪಾಧ್ಯಾಯ, ರೇಷ್ಮಾ ಕೆ.ಬಿ., ಆರೋಗ್ಯ ಸುರಕ್ಷಾಧಿಕಾರಿ, ಕೊಡಿಯಾಲ, ಡಾ. ವರ್ಷ, ಎ.ಜೆ. ಆಸ್ಪತ್ರೆ, ಮಂಗಳೂರು ಹಾಗೂ ಕಾರ್ತಿಕ್ ಬಿ., ಪಬ್ಲಿಕ್ ರಿಲೇಷನ್ಸ್ ಆಫೀಸರ್, ಎ.ಜೆ. ಆಸ್ಪತ್ರೆ, ಮಂಗಳೂರು ಉಪಸ್ಥಿತರಿದ್ದರು.


ಶ್ರೀಲಕ್ಷ್ಮಿ ಉಪಾಧ್ಯಾಯ ಕೈಪಲಾಜೆ ಇವರು ಪ್ರಾರ್ಥಿಸಿದರು. ಬಳಗದ ಮಾಜಿ ಅಧ್ಯಕ್ಷರಾದ ಪ್ರಸಾದ್ ಕೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಲೋಕೇಶ್ ಕೆ.ವಿ. ವಂದನಾರ್ಪಣೆ ಸಲ್ಲಿಸಿದರು. ದಶಮಾನೋತ್ಸವದ ಸಂಚಾಲಕರಾದ ಕೇಶವ ಕೆ.ಪಿ. ಕಾರ್ಯಕ್ರಮವನ್ನು ನಿರೂಪಿಸಿದರು.


ಶಿಬಿರದಲ್ಲಿ ಊರಿನ ಹೆಚ್ಚಿನ ಸಂಖ್ಯೆಯ ನಾಗರಿಕರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಸೇವೆಯ ಪ್ರಯೋಜನ ಪಡೆದುಕೊಂಡರು. ಸಾರ್ವಜನಿಕರು ಸ್ನೇಹಿತರ ಬಳಗದ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ಸಮಾಜಸೇವಾ ಕಾರ್ಯಕ್ರಮಗಳಿಗೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here