






ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಜು.28 ರಂದು ಬೆಳಿಗ್ಗೆ ತೆಗ್ಗು ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ.


ಸಂಘದ ಅಧ್ಯಕ್ಷರಾದ ಪ್ರಸಾದ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಒಕ್ಕೂಟದ ಅಧಿಕಾರಿಗಳು ಭಾಗವಹಿಸಿ ಸಂಘದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ ಆದ್ದರಿಂದ ಸಂಘದ ಸದಸ್ಯರೆಲ್ಲರೂ ಕ್ಲಪ್ತ ಸಮಯದಲ್ಲಿ ಆಗಮಿಸಿ ಸಭೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘದ ಆಡಳಿತ ಮಂಡಳಿ ಅನುಮತಿ ಮೇರೆಗೆ ಸಂಘದ ಕಾರ್ಯದರ್ಶಿ ಅರ್ಪಣಾ ಎ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













