







ಪುತ್ತೂರು :ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪಿ.ಎಂ .ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಮ್ಮಿಂಜೆ ಇವರ ಜಂಟಿ ಆಶ್ರಯದಲ್ಲಿ ಜುಲೈ 29ರಂದು ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುದಾನ ವಸತಿಯುತ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರು ಮತ್ತು ಬಾಲಕಿಯರು ಹಾಗೂ ಪ್ರೌಢಶಾಲಾ ವಿಭಾಗದ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.


14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಹಂದನ್ ಖಾದರ್ (7ನೇ) ಕ್ರತಿಕ್ ಪಿ.ಕೆ (7ನೇ) ರಾಮನಾಥ್ ಜಿ ಶೆಣೈ(7ನೇ),14 ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ತೌಶಿನಿ ಶೆಟ್ಟಿ( 7ನೇ) ಅಲಿಮಾಮಿಫ (7 ನೇ) ನೇಹಾ ಅಶ್ರಫ್ (7ನೇ),17ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಹೃತ್ವಿಕ ಆರ್ (9ನೇ) ಇಂಪನ ಸಿ ಭಟ್ (9ನೇ) ಹಾಗೂ ಎ ಟಿ ಮಾಧುರ್ಯ (9ನೇ) ಇವರೆಲ್ಲರೂ ಸ್ಪರ್ಧಿಸಿ ವಿಜೇತರಾಗಿ ರನ್ನರ್ ಅಪ್ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆ ಯಾಗಿರುತ್ತಾರೆ. ಇವರಿಗೆ ಶಾಲಾ ಸಂಚಾಲಕ ರೆ. ವಿಜಯ್ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶುಭ ಹಾರೈಸಿದ್ದಾರೆ.













