







ಪುತ್ತೂರು: ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್,ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್, ಪುತ್ತೂರು ರೋಟರಿ ಮ್ಯಾಮೊಗ್ರಫಿ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ.1ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಬೊಳುವಾರ್ ನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು.



ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, ಸ್ಪೆರೋಮೆಟ್ರಿ ಪರೀಕ್ಷೆ, ಇಸಿಜಿ ಪರೀಕ್ಷೆ, ಫೈಬ್ರೋ ಸ್ಕ್ಯಾನ್, HBAIC ಪರೀಕ್ಷೆ, ಇಸಿಜಿ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ, ಸ್ತನ ಕಾಯಿಲೆ ಪತ್ತೆ ಪರೀಕ್ಷೆ (ಮ್ಯಾಮೋಗ್ರಫಿ), ಮಕ್ಕಳ ತಪಾಸಣಾ ಶಿಬಿರ, ಮೂಳೆ ಸಾಂಧ್ರತಾ ಪರೀಕ್ಷೆ, ಕೊಲೆಸ್ಟ್ರಾಲ್ ತಪಾಸಣೆಗಾಗಿ ಲಿಪಿಡ್ ಪ್ರೊಪೈಲ್ ಪರೀಕ್ಷೆ ನಡೆಯಿತು.



ಬಿಪಿಎಲ್ ಕಾರ್ಡ್ ದಾರರಿಗೆ ಸ್ತನ ಕಾಯಿಲೆ ಪತ್ತೆಯ ಪರೀಕ್ಷೆ (ಮ್ಯಾಮೋಗ್ರಫಿ) ಉಚಿತ ಹಾಗೂ ಉಳಿದವರಿಗೆ ರಿಯಾಯಿತಿ ದರದಲ್ಲಿ ಮಾಡಲಾಯಿತು.
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ರಾದ ಡಾ. ಯು ಶ್ರೀಪತಿ ರಾವ್, ಡಾ.ಸುದಾ ಎಸ್. ರಾವ್, ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ದತ್ತಾತ್ರೇಯ ರಾವ್, ಮಾಜಿ ಕಾರ್ಯದರ್ಶಿ ದಾಮೋದರ್, ಪ್ರಮುಖರಾದ ಹೆರಾಲ್ಡ್ ಮಾರ್ಥ್, ಶ್ರೀಧರ ಕಣಜ, ಸುದರ್ಶನ್ ರಾವ್, ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಆಚಾರ್ಯ, ವೃದಾಪ್ಯ & ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮಿ, ಮಕ್ಕಳ ತಜ್ಞರಾದ ಡಾ. ಸಂದೀಪ್ ಎಚ್.ಎಸ್.ಮೊದಲಾದವರು ಉಪಸ್ಥಿತರಿದ್ದರು. ಹಲವಾರು ಮಂದಿ ಆಗಮಿಸಿ ಶಿಭಿರದ ಪ್ರಯೋಜವನ್ನು ಪಡೆದುಕೊಂಡರು.

ಕಳೆದ 22 ವರುಷಗಳಿಂದ ನಿರಂತರವಾಗಿ ನಡೆಯುತ್ತಿದೆ

ರೋಟರಿ ಕ್ಲಬ್ ಪುತ್ತೂರು ಇದರ ಸಹಯೋಗದಲ್ಲಿ ಕಳೆದ 22ವರುಷಗಳಿಂದ ನಿರಂತರವಾಗಿ ನಮ್ಮ ಆಸ್ಪತ್ರೆಯಲ್ಲಿ ಈ ಒಂದು ಉಚಿತ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಾರ್ವಜನಿಕರಿಗಾಗಿ ಈ ಒಂದು ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಆ ಮೂಲಕ ಅವರ ಆರೋಗ್ಯ ಕಾಪಿಡುವಲ್ಲಿ ಈ ಒಂದು ಶಿಬಿರ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಇದು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿದೆ. ನಮ್ಮ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಹಿಂದೆ ಪುತ್ತೂರು ರೋಟರಿ ಮ್ಯಾಮೊಗ್ತಪಿ ಸೆಂಟರ್ ಅನ್ನು ಆರಂಭಿಸಲಾಗಿದ್ದು, ಆ ಮೂಲಕ ಬ್ರಸ್ಟ್ ಕ್ಯಾನ್ಸರ್ ಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈ ಮ್ಯಾಮೊಗ್ರಪಿ ಸೆಂಟರ್ ನ ಬಗ್ಗೆ ಜನರು ತಿಳಿಯುವ ಕೆಲಸವಾಗಬೇಕು. ಎಲ್ಲರೂ ಈ ಒಂದು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ.
ಡಾ. ಯು. ಶ್ರೀಪತಿ ರಾವ್ ,ಆಡಳಿತ ನಿರ್ದೇಶಕರು,ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಬೊಳುವಾರು










