







ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ )ಕಡಬ ತಾಲೂಕು ಐತ್ತೂರು ವಲಯದ 102 ನೆಕ್ಕಿಲಾಡಿ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಸಂಪನ್ಮೂಲ ವ್ಯಕ್ತಿ, ಪ್ರಗತಿಪರ ಕೃಷಿಕ ಚಿದಾನಂದ, ಲಾಭದಾಯಕ ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳು ಹಸುಗಳ ಆಯ್ಕೆ ಕರುಗಳ ಪಾಲನೆ ವಿವಿಧ ವೈಜ್ಞಾನಿಕ ಆಹಾರ ಪದ್ಧತಿ ಹಸುಗಳಿಗೆ ಕಾಲು ನೋವು ಬಾಯಿ ನೋವು ಬರದಂತೆ ಮುಂಜಾಗೃತೆ ವಹಿಸುವುದು ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.



ಕಾರ್ಯಕ್ರಮವನ್ನು ಸೇವಾಪ್ರತಿನಿಧಿಯಾದ ಜ್ಞಾನಸೇಲ್ವಿ ನಿರೂಪಿಸಿ, ಸ್ವಾಗತಿಸಿದರು. ಭಾರ್ಗವಿ ಸಂಘದ ಸದಸ್ಯ ಸೀತಾರಾಮ್ ವಂದಿಸಿದರು.ಕಾರ್ಯಕ್ರಮದಲ್ಲಿ ನೆಕ್ಕಿಲಾಡಿ ಒಕ್ಕೂಟ ಅಧ್ಯಕ್ಷ ವಿನಯ್ ಜಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.










